ನವೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವ್ದು ಗೊತ್ತಾ?
ಭಾರತೀಯ ಮಾರುಕಟ್ಟೆಯಲ್ಲಿ 2020ರ ನವೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ ಬಹಿರಂಗವಾಗಿದೆ. ಎಂದಿನಂತೆ ಮಾರುತಿ ಸುಜುಕಿ ತನ್ನ ಪಾರುಪತ್ಯವನ್ನು ಮುಂದುವರಿಸಿದೆ.
1. ಮಾರುತಿ ಸ್ವಿಫ್ಟ್: ನವೆಂಬರ್ ತಿಂಗಳಿನಲ್ಲಿ ಮಾರುತಿ ಕಂಪನಿಯ 18,498 ಸ್ವಿಫ್ಟ್ ಕಾರುಗಳು ಮಾರಾಟವಾಗಿವೆ. ಆ ಮೂಲಕ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
2. ಮಾರುತಿ ಸುಜುಕಿ ಬಲೆನೊ: ಕಳೆದ ತಿಂಗಳು 17,872 ಮಾರುತಿ ಸುಜುಕಿ ಬಲೆನೊ ಕಾರುಗಳು ಮಾರಾಟವಾಗಿವೆ. ಇದು ಮಾರುತಿ ಸ್ವಿಫ್ಟ್ ಕಾರಿಗೆ ಸ್ಪರ್ಧೆ ನೀಡುತ್ತಿದೆ.
3. ಮಾರುತಿ ಸುಜುಕಿ ವ್ಯಾಗನಾರ್ : ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿಯ ವ್ಯಾಗನಾರ್ ಕಾರು ಸ್ಥಾನ ಪಡೆದುಕೊಂಡಿದೆ. ನವೆಂಬರ್ ನಲ್ಲಿ 16,356 ವ್ಯಾಗನಾರ್ ಕಾರುಗಳು ಮಾರಾಟವಾಗಿವೆ.
4. ಮಾರುತಿ ಸುಜುಕಿ ಆಲ್ಟೋ: ನವೆಂಬರ್ ತಿಂಗಳನಲ್ಲಿ ಒಟ್ಟು 15,321 ಕಾರುಗಳು ಮಾರಾಟವಾಗಿವೆ.
5. ಮಾರುತಿ ಸುಜುಕಿ ಡಿಸೈರ್: ಕಾರು ಮಾರುಕಟ್ಟೆಯಲ್ಲಿ ಡಿಸೈರ್ ಕಾರಿನ ಆರ್ಭಟ ಜೋರಾಗಿದ್ದು, ನವೆಂಬರ್ ನಲ್ಲಿ 13,536 ಕಾರುಗಳು ಮಾರಾಟವಾಗಿವೆ. ಕಳೆದ ನವೆಂಬರ್ಗೆ ಹೋಲಿಸಿದರೆ ಶೇ.23.3 ರಷ್ಟು ಬೇಡಿಕೆ ಕಡಿಮೆಯಾಗಿದ್ದರೂ ಜನಪ್ರಿಯತೆ ಕುಸಿದಿಲ್ಲ.
6.ಹುಂಡೈ ಕ್ರೇಟಾ : ನವೆಂಬರ್ ನಲ್ಲಿ 12,017 ಕ್ರೇಟಾ ಕಾರುಗಳು ಮಾರಾಟವಾಗಿವೆ. ಸ್ಫೋರ್ಟ್ ಯುಟಿಲಿಟಿ ವೆಹಿಕಲ್ ಮಾದರಿಯಲ್ಲಿ ಈ ಕಾರು ಪ್ರಸಿದ್ಧವಾಗಿದೆ.
7. ಕಿಯಾ ಸಾನೆಟ್: ಕಳೆದ ತಿಂಗಳು ಒಟ್ಟು 11,417 ಸಾನೆಟ್ ಕಾರುಗಳು ಮಾರಾಟಗೊಂಡಿವೆ. ಇದು ದಕ್ಷಿಣ ಕೊರಿಯಾದ ಕಂಪನಿ.
8.ಮಾರುತಿ ಸುಜುಕಿ ಇಕೋ : ಮಾರುತಿ ಕಂಪನಿಯ ಯಟಿಲಿಟಿ ವೆಹಿಕಲ್ ಇಕೋ 11,183 ಕಾರುಗಳನ್ನು ಮಾರಾಟ ಮಾಡಿದೆ.
9. ಹುಂಡೈ ಗ್ರಾಂಡ್ ಐ10 : ಕಳೆದ ತಿಂಗ್ಳು ಒಟ್ಟು 10,936 ಗ್ರಾಂಡ್ ಐ10 ಕಾರುಗಳ ಮಾರಾಟ ಕಂಡಿದೆ. ಈ ಕಾರಿನ ಮಾರಾಟ ಶೇ.7.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.
10: ಮಾರುತಿ ಸುಜುಕಿ ಎರ್ಟಿಗಾ : ಕಳೆದ ತಿಂಗಳು ಒಟ್ಟು 9,557 ಕಾರುಗಳನ್ನು ಮಾರಾಟ ಮಾಡಿ ಮೀಡಿಯಂ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆದ ಬಾರಿ 10ನೇ ಸ್ಥಾನವನ್ನು ವಿಟಾರಾ ಬ್ರೀಜಾ ಪಡೆದುಕೊಂಡಿತ್ತು.
ಒಟ್ಟಾರೆ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಂಪನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿವೆ. ಹುಂಡೈ ಕಂಪನಿಯ 2 ಕಾರುಗಳು, ಕಿಯಾ ಕಂಪನಿಯ 1 ಕಾರು ಸ್ಥಾನ ಪಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel