ಜನರ ಐಕ್ಯತೆ ಮತ್ತು ಸಂವಿಧಾನಕ್ಕೆ ಅನುಸಾರವಾಗಿ ಕೆಲಸ ಮಾಡುವಂತೆ ಅಣ್ಣಾಮಲೈಗೆ ಸಲಹೆ ನೀಡಿದ ಸಸಿಕಾಂತ್ ಸೆಂಥಿಲ್
ಚೆನ್ನೈ, ಅಗಸ್ಟ್ 27: ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಮಂಗಳವಾರ ಬಿಜೆಪಿಗೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕುವುದರೊಂದಿಗೆ, ಈಗ ಎಲ್ಲರ ಕಣ್ಣುಗಳು ಅವರ ಸ್ನೇಹಿತ ಮತ್ತು ಮಾಜಿ ಐಎಎಸ್ ಅಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಅವರ ಮುಂದಿನ ನಿರ್ಧಾರದ ಮೇಲೆ ಬಿದ್ದಿದೆ. ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸಿಎಎ ಮತ್ತು ಎನ್ಆರ್ಸಿ ಮಸೂದೆಗಳನ್ನು ವಿರೋಧಿಸಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತೀವ್ರ ಟೀಕೆಗೆ ಒಳಗಾಗಿದ್ದರು.
ರಾಜಕೀಯ ಪ್ರಕ್ರಿಯೆಯಲ್ಲಿ ಅಣ್ಣಾಮಲೈ ಭಾಗವಹಿಸಿದ್ದನ್ನು ಸ್ವಾಗತಿಸಿರುವ ಸಸಿಕಾಂತ್ ಸೆಂಥಿಲ್ ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ತಾವು ಸೇರುವುದನ್ನು ನಿರಾಕರಿಸಿದ್ದಾರೆ. ಸೆಂಥಿಲ್ ಅವರು ಬಿಜೆಪಿ ಸೇರಿರುವ ಅಣ್ಣಾಮಲೈ ಅವರ ಬಗ್ಗೆ ಹೆಚ್ಚು ಚರ್ಚಿಸಲು ನಿರಾಕರಿಸಿದ ಅವರು ಬಿಜೆಪಿ ಮತ್ತು ಅದರ ರಾಜಕೀಯ ಮಾರ್ಗದರ್ಶಕ ಆರ್ಎಸ್ಎಸ್ನ ಲಾಭಾಂಶವನ್ನು ಪಡೆದುಕೊಳ್ಳಲು ಬಿಜೆಪಿ ಮತ್ತು ಅದರ ರಾಜಕೀಯ ಮಾರ್ಗದರ್ಶಕ ಆರ್ಎಸ್ಎಸ್ ‘ಸಿಂಗಾಮ್’ ಎಂದು ಖ್ಯಾತರಾಗಿರುವ ಅಣ್ಣಾಮಲೈ ಅವರ ಜನಪ್ರಿಯತೆಯ ಲಾಭ ಪಡೆಯಲು ಬಯಸುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.
ಅಣ್ಣಾಮಲೈ ಅವರಿಗೆ ನನ್ನ ಏಕೈಕ ಸಲಹೆ ಏನೆಂದರೆ, ನಮ್ಮ ಜನರ ರಕ್ತದಿಂದ ಈ ಸಂವಿಧಾನವನ್ನು ನಾವು ಪಡೆದುಕೊಂಡಿದ್ದೇವೆ ಮತ್ತು ನಾವು ಎಲ್ಲಿದ್ದರೂ ಅದು ಯಾವಾಗಲೂ ಸರ್ವೋಚ್ಚವಾಗಿರುತ್ತದೆ. ಅವರು ಜನರ ಐಕ್ಯತೆ ಮತ್ತು ಸಂವಿಧಾನದ ಮನೋಭಾವಕ್ಕಾಗಿ ಕೆಲಸ ಮಾಡಬೇಕೆಂದು ನಾನು ನಿರೀಕ್ಷಿಸುತ್ತೇನೆ ಎಂದು ಸೆಂಥಿಲ್ ಹೇಳಿದರು.
ಅನೇಕ ರಾಜಕೀಯ ಪಕ್ಷಗಳ ಆಹ್ವಾನವನ್ನು ನಿರಾಕರಿಸಿರುವುದಾಗಿ ತಿಳಿಸಿದ ಸೆಂಥಿಲ್, ಜನರ ಸಮಸ್ಯೆಗಳನ್ನು ಯಾರೂ ಪರಿಹರಿಸಲು ಸಾಧ್ಯವಿಲ್ಲದ ಕಾರಣ ಅವುಗಳಲ್ಲಿ ಯಾವುದರ ಬಗ್ಗೆಯೂ ನಂಬಿಕೆ ಇಲ್ಲ ಎಂದು ಹೇಳಿದರು. ರಾಜಕೀಯ ಪಕ್ಷಗಳು ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಡುವುದು ಅಸಾಧ್ಯ ಎಂದು ಹೇಳಿದ ಅವರು ಜನರಿಂದ ಮಾತ್ರ ಹೋರಾಟ ಸಾಧ್ಯವೇ ಹೊರತು ಯಾವುದೇ ರಾಜಕೀಯ ಪಕ್ಷದಿಂದಲ್ಲ ಎಂದರು. ಜನರ ಚಳುವಳಿಗಿಂತ ದೊಡ್ಡದಾದ ಯಾವುದೇ ಪಕ್ಷವನ್ನು ನಾನು ಕಾಣುವುದಿಲ್ಲ ಮತ್ತು ನಾನು ಜನರೊಂದಿಗೆ ಇರಲು ಬಯಸುತ್ತೇನೆ ಎಂದು ಅವರು ಹೇಳಿದರು.