ರಾಜ್ಯದ ಪ್ರಮುಖ ಸುದ್ದಿಗಳು : LATEST UPDATES
ಪೂರ್ಣ ಸುದ್ದಿಗಳನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ಮಾರ್ಚ್ 27ರಂದು ಕರ್ನಾಟಕ ಬಂದ್
ಮಾರ್ಚ್ 27ರಂದು ಕರ್ನಾಟಕ ಬಂದ್
ಬೆಂಗಳೂರು : ಬೆಲೆ ಏರಿಕೆ ವಿರೋಧಿಸಿ ಹಾಗೂ ತಮಿಳುನಾಡು ಕೈಗೆತ್ತಿಕೊಂಡಿರುವ ಕಾವೇರಿ ನೀರಾವರಿ ಯೋಜನೆಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಮಾರ್ಚ್ 27 ರಂದು ಕರ್ನಾಟಕ ಬಂದ್ ನಡೆಸಲು ಕನ್ನಡ ಒಕ್ಕೂಟ ಮುಂದಾಗಿದೆ. ಬೆಲೆ ಏರಿಕೆ ಮತ್ತು ತಮಿಳುನಾಡು ಕಾವೇರಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ತಮಿಳುನಾಡಿನ ಕಾವೇರಿ ನದಿ ಜೋಡಣೆಯಿಂದಾಗಿ ಕರ್ನಾಟಕಕ್ಕೆ ಭಾರಿ ನಷ್ಟವಾಗುತ್ತದೆ. ಹೀಗಾಗಿ ಕರ್ನಾಟಕ ಸರ್ಕಾರ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾಮಗಾರಿಗೆ ತಡೆ ತರಬೇಕು ಎಂದು ಮನವಿ ಮಾಡಿಕೊಂಡರು.
`ಈ ಸಲ ಕಪ್ ನಮ್ಮದಾಗ್ಲಿ’ ಅಂತಾ ಹರಕೆ ಕಟ್ಟಿಕೊಂಡ `ಆರ್ ಸಿಬಿಯನ್’
`ಈ ಸಲ ಕಪ್ ನಮ್ಮದಾಗ್ಲಿ’ ಅಂತಾ ಹರಕೆ ಕಟ್ಟಿಕೊಂಡ `ಆರ್ ಸಿಬಿಯನ್’
ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರಿನ ಆರ್ ಸಿಬಿ ಅಭಿಮಾನಿಯೊಬ್ಬ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಕಪ್ ಗೆಲ್ಲಲಿ ಅಂತಾ ದೇವರ ಮೊರೆ ಹೋಗಿದ್ದಾನೆ.
ಹೌದು..! ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವದ ವೇಳೆ ಬೇಡಿಕೆಯನ್ನು ಇಡೇರಿಸುವಂತೆ ತೇರಿಗೆ ಬಾಳೆಹಣ್ಣನ್ನು ಎಸೆದು ಹರಕೆ ಕಟ್ಟಿಕೊಳ್ಳುವುದು ವಾಡಿಕೆಯಾಗಿದೆ.
ಈ ಹಿನ್ನೆಲೆ ಇಲ್ಲಿನ ಆರ್ ಸಿಬಿ ಅಭಿಮಾನಿ ತೇರಿಗೆ ಬಾಳೆಹಣ್ಣು ಮತ್ತು 10 ರೂ. ನೋಟಿನ ಮೇಲೆ ಜೈ ಆರ್ ಸಿಬಿ ಅಂತಾ ಬರೆದು ಹರಕೆ ಕಟ್ಟಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
`ರಾಜ್ಯದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ನೆಮ್ಮದಿ ತರುವ ಸುದ್ದಿ’
`ರಾಜ್ಯದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ನೆಮ್ಮದಿ ತರುವ ಸುದ್ದಿ’
ಬೆಂಗಳೂರು : 2019 20ನೇ ಸಾಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಗುಡ್ ನ್ಯೂಸ್ ಕೊಟ್ಟಿದ್ದು, ‘ಹಳೆಯ ಬಸ್ ಪಾಸ್ ಅವಧಿಯನ್ನ ದಿನಾಂಕ 31.03.2021ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ನೆಮ್ಮದಿ ತರುವ ಸುದ್ದಿ. ಸಾರಿಗೆ ಸಚಿವರು ಹಾಗೂ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು ಅಂತಾ ಬರೆದುಕೊಂಡಿದ್ದಾರೆ.
ಪೊಲೀಸ್ ಜೀಪ್ ನಲ್ಲಿ ಕೆಆರ್ ಎಸ್ ಡ್ಯಾಂ ಮೇಲೆ ಜಾಲಿ ರೈಡ್
ಪೊಲೀಸ್ ಜೀಪ್ ನಲ್ಲಿ ಕೆಆರ್ ಎಸ್ ಡ್ಯಾಂ ಮೇಲೆ ಜಾಲಿ ರೈಡ್
ಮಂಡ್ಯ : ಭದ್ರತೆ ದೃಷ್ಠಿಯಿಂದ ಕೆಆರ್ ಎಸ್ ಡ್ಯಾಂ ಮೇಲೆ ಯಾರೂ ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಆದ್ರೆ ಈ ನಿಯಮವನ್ನು ಉಲ್ಲಂಘಿಸಿ ಸರ್ಕಾರಿ ವಾಹನದಲ್ಲಿ ಯುವಕನೊರ್ವ ಕೆ ಆರ್ ಎಸ್ ಡ್ಯಾಂ ಮೇಲೆ ಜಾಲಿ ಡ್ರೈವ್ ಮಾಡಿದ್ದಾನೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಯುವಕನ ಜಾಲಿ ರೈಡ್ ಗೆ ಪೊಲೀಸ್ ಅಧಿಕಾರಿಯೇ ಸಾಥ್ ನೀಡಿದ್ದು, ಯುವಕ ಜೀಪ್ ಚಲಾಯಿಸುತ್ತಿದ್ದರೇ ಪಕ್ಕದಲ್ಲಿ ಕುಳಿತ ಪೊಲೀಸ್ ಅಧಿಕಾರಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಮಂಗಳೂರು – 93 ಸಿಸಿಟಿವಿ ಕ್ಯಾಮೆರಾಗಳಲ್ಲಿ, ಐದು ಮಾತ್ರ ಕಾರ್ಯನಿರ್ವಹಣೆ
ಮಂಗಳೂರು, ಫೆಬ್ರವರಿ27: ಕಳೆದ ವರ್ಷ ಟ್ರಾಫಿಕ್ ಪೊಲೀಸರು ಸ್ಥಾಪಿಸಿದ 93 ಸಿಸಿಟಿವಿ ಕ್ಯಾಮೆರಾಗಳಲ್ಲಿ, ಐದು ಮಾತ್ರ ಈಗ ಕಾರ್ಯನಿರ್ವಹಿಸುತ್ತಿವೆ.
ಪೊಲೀಸ್ ಅಧಿಕಾರಿಗಳೇ ಕ್ಯಾಮೆರಾಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ನಂತರ ಮತ್ತು ಈ ಕ್ಯಾಮೆರಾಗಳ ವಾರ್ಷಿಕ ನಿರ್ವಹಣೆಗೆ ಯಾವುದೇ ಕ್ರಮಗಳಿಲ್ಲ ಎಂದು ತಿಳಿದ ನಂತರ ಇದು ಬೆಳಕಿಗೆ ಬಂದಿದೆ.
ಆಯುಕ್ತರು ಈ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ಗುತ್ತಿಗೆದಾರರಿಗೆ ಪತ್ರ ಬರೆದಿದ್ದಾರೆ.
ಕ್ಯಾಮೆರಾಗಳು ಸೆರೆಹಿಡಿದ ಚಿತ್ರಗಳು ಹಗಲಿನಲ್ಲಿ ಅಸ್ಪಷ್ಟವಾಗಿದೆ ಮತ್ತು ರಾತ್ರಿಯಲ್ಲಿ ಕ್ಯಾಮೆರಾಗಳು ಯಾವುದೇ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಅಲ್ಲದೆ, ರಸ್ತೆ ಮತ್ತು ಫುಟ್‌ಪಾತ್ ಅಭಿವೃದ್ಧಿ ಕಾರ್ಯಗಳಿಗಾಗಿ ತೆಗೆದುಹಾಕಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಮರುಸ್ಥಾಪಿಸಲಾಗಿಲ್ಲ. ಲೇಡಿಹಿಲ್ ಮತ್ತು ಲಾಲ್‌ಬಾಗ್ ಜಂಕ್ಷನ್‌ಗಳ ಫುಟ್‌ಪಾತ್‌ನಲ್ಲಿರುವ ಕ್ಯಾಮೆರಾಗಳನ್ನು ಸಹ ತೆಗೆದುಹಾಕಲಾಗಿದೆ. ಆದಾಗ್ಯೂ, ಈಗ ಮರುಸ್ಥಾಪನೆ ಮಾಡಲಾಗುತ್ತಿದೆ.
ಖಾಸಗಿ ಆಸ್ತಿಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳ ರಿಸೀವರ್‌ಗಳನ್ನು ಸ್ಥಳೀಯರು ತೆಗೆದುಹಾಕಿದ್ದು, ಇದು ಸಂಚಾರ ಪೊಲೀಸ್ ಇಲಾಖೆಗೆ ತೊಂದರೆ ತಂದಿದೆ.
ಲಕ್ಕವಳ್ಳಿ | ರಕ್ತದಾನ ಮಾಡಿ ಮಾದರಿಯಾದ ಪಿಎಸ್ ಐ ಮೇಘ
ಲಕ್ಕವಳ್ಳಿ | ರಕ್ತದಾನ ಮಾಡಿ ಮಾದರಿಯಾದ ಪಿಎಸ್ ಐ ಮೇಘ
ಚಿಕ್ಕಮಗಳೂರು : ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಯುವ ಪೀಳಿಗೆಯರಿಗೆ ಪಿಎಸ್ ಐ ಮೇಘ ಟಿ ಎನ್ ಯುವ ಪೀಳಿಗೆಯರಿಗೆ ಮಾದರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಸ್ಪೂರ್ತಿ ಸೇವಾ ಸಂಸ್ಥೆ ವತಿಯಿಂದ ಜಿಲ್ಲಾ ಮೆಗ್ಗಾನ್ ಭೋಧಕ ಆಸ್ಪತ್ರೆ ರಕ್ತನಿಧಿ ಹಾಗೂ ಪ್ರಾಥಮಿಕ ಆಗೋಗ್ಯ ಕೇಂದ್ರ ಲಕ್ಕವಳ್ಳಿ ಇವರ ಸಹಯೋಗದೊಂದಿಗೆ ಒಂದು ದಿನದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕರ್ತವ್ಯದಲ್ಲಿದ್ದ ಪಿಎಸ್ ಐ ಮೇಘ ಅವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.
ಇನ್ನು ಈ ಶಿಬಿರಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ತರೀಕೆರೆ ಶಾಸಕ ಡಿ ಎಸ್ ಸುರೇಶ್ ರವರು ಪಿಎಸ್ ಐ ಮೇಘ ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೇ, ರಕ್ತದಾನಿಗಳಿಗೆ ಫಲಹಾರ ವಿತರಣೆಯನ್ನು ಮಾಡಿದ್ದಾರೆ.
ಈ ಶಿಬಿರಕ್ಕೆ ಊರಿನ 80 ಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ಮಹಿಳೆಯರು ಮತ್ತು ಹಿರಿಯರು ಹೆಚ್ಚಾಗಿ ರಕ್ತದಾನ ಮಾಡಿದ್ದು ವಿಶೇಷತೆಯಾಗಿತ್ತು.