Puneet Raj Kumar | 20 ಸರ್ಕಾರಿ ಶಾಲೆ.. 100 ಮಕ್ಕಳು.. ಅಪ್ಪು ಉಪಗ್ರಹ
ಬೆಂಗಳೂರು : ಕರುನಾಡಿನ ರಾಜ ರತ್ನ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನ 20 ಸರ್ಕಾರಿಯ ಶಾಲೆಯ 100 ಮಕ್ಕಳು ಉಪಗ್ರಹ ತಯಾರಿಸುತ್ತಿದ್ದಾರೆ.
ಈ ಉಪಗ್ರಹ ಉಡಾವಣಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಉಪಗ್ರಹ ಉಡಾವಣೆ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ್, ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ 75 ಉಪಗ್ರಹಗಳನ್ನ ಉಡಾವಣೆ ಮಾಡುತ್ತಿದೆ.
ಇದರಲ್ಲಿ ಒಂದು ಉಪಗ್ರಹವನ್ನು ರಾಜ್ಯ ಸರ್ಕಾರದ ಸಹಕಾರದಲ್ಲಿ ಕರ್ನಾಟಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವುದು ವಿಶೇಷವಾಗಿದೆ.
ಈ ವಿದ್ಯಾರ್ಥಿಗಳು ನಿರ್ಮಾಣ ಮಾಡುತ್ತಿರೋ ಉಪಗ್ರಹಕ್ಕೆ ಪುನೀತ್ ರಾಜ್ ಕುಮಾರ್ ಉಪಗ್ರಹ ಅಂತ ಹೆಸರು ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ಹಣ ಖರ್ಚು ಆಗಲಿದೆ. ಸುಮಾರು 1.5 ಕೆಜಿ ಉಪಗ್ರಹದ ತೂಕ ಇರಲಿದೆ. ಅಕ್ಟೋಬರ್ ವೇಳೆಗೆ ಉಪಗ್ರಹ ನಿರ್ಮಾಣ ಕಾರ್ಯ ಮುಕ್ತಾಯ ಅಗಲಿದೆ.
SATELLITE PROJECT LAUNCHED IN THE NAME OF PUNEETH RAJKUMAR saaksha tv