Savarkar | ಹುಲಿಯಾ ತವರಿನಲ್ಲಿ ಸಾವರ್ಕರ್ ರಥಯಾತ್ರೆ
ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಬಿಜೆಪಿ ರಣ ಕಹಳೆ ಮೊಳಗಿಸಿದೆ.
ಸಿದ್ದರಾಮಯ್ಯ ಅವರ ಮಡಿಕೇರಿ ಚಲೋ ಪಾದಯಾತ್ರೆಗೆ ತಿರುಗೇಟು ನೀಡಲು ಮೈಸೂರಿನಲ್ಲಿ ಬಿಜೆಪಿ ಸಾವರ್ಕರ್ ರಥಯಾತ್ರೆ ಆಯೋಜಿಸಿದೆ.
ಎಂಟು ದಿನಗಳ ಕಾಲ ನಡೆಯಲಿರುವ ಈ ರಥಯಾತ್ರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿರುವ ಬಿಎಸ್ ಯಡಿಯೂರಪ್ಪ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶೇಷ ಇತಿಹಾಸವಿದೆ.
ಇಂತಹ ಭೂಮಿಯಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿಎಸ್ ವೈ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಸಾವರ್ಕರ್ ಅವರು ವೀರ ಸಾವರ್ಕರ್ ಎಂದು ಕರೆಸಿಕೊಂಡರು.

ಆದ್ರೆ ರಾಜ್ಯದಲ್ಲಿ ಸಾವರ್ಕರ್ ವಿರುದ್ಧ ಅಪ್ರಚಾರ ನಡೆಯುತ್ತಿದೆ. ಚಿಲ್ಲರೆ ರಾಜಕಾರಣಕ್ಕಾಗಿ ಅವರ ಹೆಸರಿಗೆ ಮಸಿಬಳಿಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸಾವರ್ಕರ್ ಭಾರತೀಯ ಮಾತೆಯ ಹೆಮ್ಮೆಯ ಪುತ್ರ. ಸ್ವಾತಂತ್ರ್ಯ ಹೋರಾಟದ ಜೊತೆಗೆ ಹಿಂದೂ ಧರ್ಮದ ಸುಧಾರಣೆಗೆ ತೊಡಗಿಸಿ ಕೋಮಡಿದ್ದರು.
ಭಾರತ ಮಾತ್ರವಲ್ಲ, ಜಗತ್ತಿನ ಯಾವುದೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅಂತಾ ವೀರ ಹೋರಾಟಗರ ಸಿಗಲ್ಲ. ಸಾವರ್ಕರ್ ಚಿಂತನೆಗಳನ್ನು ಮನೆಮನೆಗಳಿಗೆ ತಲುಪಿಸಬೇಕು ಎಂದು ಕರೆಕೊಟ್ಟರು.








