ಎಸ್ಬಿಐ ಎಫ್ಡಿ ಅಥವಾ ಪೋಸ್ಟ್ ಆಫೀಸ್ ಎಫ್ಡಿ? ಹೂಡಿಕೆಗೆ ಯಾವುದು ಉತ್ತಮ?
ನೀವು ಕಡಿಮೆ ರಿಟರ್ನ್ಸ್ ಆಗಿದ್ದರೂ ಪರವಾಗಿಲ್ಲ ಆದರೆ ಸುರಕ್ಷತೆಗೆ ಆದ್ಯತೆ ನೀಡುವವರಲ್ಲಿ ಒಬ್ಬರಾಗಿದ್ದರೆ, ನಿಶ್ಚಿತ ಠೇವಣಿ (FD) ನಿಮಗೆ ಸೂಕ್ತ ಆಯ್ಕೆಯಾಗಿದೆ. ನಿಶ್ಚಿತ ಠೇವಣಿ (ಎಫ್ಡಿ) ಹೂಡಿಕೆಯ ಮೇಲೆ ಸುರಕ್ಷಿತ ಖಾತರಿ ಲಾಭವನ್ನು ನೀಡುವ ಜನಪ್ರಿಯ ಯೋಜನೆಯಾಗಿದೆ.

ಹಿರಿಯ ನಾಗರಿಕರಿಗೂ ಇದು ಒಂದು ಉತ್ತಮ ಆಯ್ಕೆಯಾಗಿದೆ. ದೇಶವು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿರುವಾಗ, ದೇಶದ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳು ತಮ್ಮ ಎಫ್ಡಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿವೆ. ಎಫ್ಡಿ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲಾಗಿದೆ. ಅಂಚೆ ಕಚೇರಿಯಲ್ಲೂ ಎಫ್ಡಿ ಠೇವಣಿ ಆರಂಭಿಸಬಹುದು. ಪೋಸ್ಟ್ ಆಫೀಸ್ ಎಫ್ಡಿ ಠೇವಣಿ ಯೋಜನೆಗಳು ಬ್ಯಾಂಕ್ ಎಫ್ಡಿ ಗಳಂತೆಯೇ ಇರುತ್ತವೆ.
ಒಬ್ಬರು ಅಥವಾ ಜಂಟಿಯಾಗಿ ಯಾವುದೇ ವ್ಯಕ್ತಿಯು ಈ ಖಾತೆಯನ್ನು 1000 ರೂಪಾಯಿಗಳೊಂದಿಗೆ ತೆರೆಯಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಅಂಚೆ ಕಚೇರಿಯ ಅವಧಿ ಠೇವಣಿಗಳ ಅವಧಿ ಒಂದು ವರ್ಷದಿಂದ ಐದು ವರ್ಷಗಳವರೆಗೆ ಇರುತ್ತದೆ. ಪ್ರಸ್ತುತ, ಸರ್ಕಾರವು 2021-22ರ ಮೂರನೇ ತ್ರೈಮಾಸಿಕದ ಬಡ್ಡಿದರಗಳನ್ನು ಬದಲಿಸಿಲ್ಲ.
ಎಸ್ಬಿಐ ಎಫ್ಡಿ ಬಡ್ಡಿದರಗಳ ಬಗ್ಗೆ ಹೇಳುವುದಾದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸಾಮಾನ್ಯ ಜನರಿಗೆ 2.90% ರಿಂದ 5.30% ಬಡ್ಡಿದರಗಳನ್ನು ನೀಡುತ್ತದೆ.ಇದು ರೂ 2 ಕೋಟಿಗಿಂತ ಕಡಿಮೆ ಎಫ್ಡಿ ಠೇವಣಿಗಳಿಗೆ 7 ದಿನಗಳಿಂದ ಐದು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ನೀಡುತ್ತದೆ.
ಐದು ವರ್ಷದಿಂದ 10 ವರ್ಷಗಳವರೆಗಿನ ಅವಧಿಗಳಿಗೆ ಬಡ್ಡಿ ದರವು 5.40% ಆಗಿದೆ. ಈ ದರಗಳು ಜನವರಿ 1, 2021 ರಿಂದ ಜಾರಿಗೆ ಬಂದಿದೆ. ಆದರೆ ಹಿರಿಯ ನಾಗರಿಕರು 5 ವರ್ಷಕ್ಕಿಂತ ಕಡಿಮೆ ಅವಧಿಗೆ 0.50% ಹೆಚ್ಚುವರಿ ಬಡ್ಡಿಯನ್ನು ಗಳಿಸುತ್ತಾರೆ. ಆದರೆ ಅವರು 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್ಗಳ ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ.
ಜನವರಿ 8, 2021 ರಿಂದ ಅನ್ವಯವಾಗುವ ಎಸ್ಬಿಐನ ಹೊಸ ಎಫ್ಡಿ ಬಡ್ಡಿದರಗಳು
07 ದಿನಗಳಿಂದ 45 ದಿನಗಳವರೆಗೆ: 2.90%
46 ದಿನಗಳಿಂದ 179 ದಿನಗಳು: 3.90%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: 4.40%
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: 5.00%
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: 5.10%
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: 5.30%
5 ವರ್ಷದಿಂದ 10 ವರ್ಷಗಳವರೆಗೆ: 5.40%

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬೀಟ್ ರೂಟ್ ಅಕ್ಕಿ ರೊಟ್ಟಿ https://t.co/GhSdUlzcVx
— Saaksha TV (@SaakshaTv) October 6, 2021
ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ https://t.co/Nj0iNdG1LC
— Saaksha TV (@SaakshaTv) October 5, 2021
ಪಿಡಿಎಫ್ ಫೈಲ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ವರ್ಡ್ಗೆ ಪರಿವರ್ತಿಸುವ ವಿಧಾನ https://t.co/MtJMFDXTpO
— Saaksha TV (@SaakshaTv) October 5, 2021
ಕೊಬ್ಬರಿ ಬಿಸ್ಕೆಟ್ https://t.co/D42XYnuJaK
— Saaksha TV (@SaakshaTv) October 5, 2021
#SBIFD #postoffice #FD








