ನವದೆಹಲಿ: ನಾಳೆಯಿಂದ ಆರಂಭವಾಗಲಿರುವ ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥನ ರಥಯಾತ್ರೆಗೆ ಸುಪ್ರೀಂಕೋರ್ಟ್ ಷರತ್ತಿನ ಅನುಮತಿ ನೀಡಿದೆ.
ರತಯಾತ್ರೆಗೆ ಅನುಮತಿ ಕೊಟ್ಟರೆ ಭಕ್ತರು ಸೇರುತ್ತಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆಯೂ ಇದೆ. ಹೀಗಾಗಿ ರಥಯಾತ್ರೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರವೇ ನಿರ್ಧಾರಕ್ಕೆ ಬರಲಿ. ಆದರೆ, ಜನರು ಸೇರದ ಹಾಗೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ರಥಯಾತ್ರೆ ಎಂದಾಗ ಸಾವಿರಾರು ಭಕ್ತರು ಸೇರುತ್ತಾರೆ. ಆದರೆ, ಈ ಬಾರಿ ಜನರು ಸೇರದ ಹಾಗೆ ನೋಡಿಕೊಂಡು ರಥಯಾತ್ರೆ ನಡೆಸಲು ಅವಕಾಶವಿದೆ. ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ನಿಲ್ಲಿಸಲು ಆಗದು. ಒಡಿಸ್ಸಾ ಸರ್ಕಾರದ ನಿಲುವು ಕೂಡ ಇದೇ ಆಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಜೂನ್.18ರಂದು ನೀಡಿದ್ದ ತನ್ನ ಆದೇಶ ಮಾರ್ಪಡಿಸಿ ರಥಯಾತ್ರೆಗೆ ಗ್ರೀನ್ ಸಿಗ್ನಲ್ ನೀಡಿದೆ.
ನಾಳೆಯಿಂದ ಸುಮಾರು 10ರಿಂದ 12 ದಿನಗಳ ಕಾಲ ಪುರಿ ಜಗನ್ನಾಥ ರಥಯಾತ್ರೆ ನಡೆಯಲಿದೆ. ಈ ವರ್ಷ ಕೊರೊನಾ ಮಾಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಥಯಾತ್ರೆ ನಡೆಸುವ ದಿನ ಕರ್ಫ್ಯೂ ವಿಧಿಸಿ ಕೇವಲ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸರ್ಕಾರದ ಪ್ರತಿನಿಧಿಗಳು ಮಾತ್ರ ಇರುವಂತೆ ನೋಡಿಕೊಳ್ಳುತ್ತೇವೆ. ರಥಯಾತ್ರೆಯ ನೇರ ಪ್ರಸಾರವನ್ನು ಟಿವಿಗಳಲ್ಲಿ ಟೆಲಿಕಾಸ್ಟ್ ಮಾಡುತ್ತೇವೆ. ರಥಯಾತ್ರೆಯಲ್ಲಿ ಭಕ್ತರು ಬಾರದಂತೆ ಎಲ್ಲಾ ಅಗತ್ಯಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹಾಗೂ ಒಡಿಸ್ಸಾ ಸರ್ಕಾರಗಳು ಸುಪ್ರೀಂಕೋರ್ಟ್ ಗೆ ಭರವಸೆ ನೀಡಿವೆ.
ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ
ಇತ್ತೀಚೆಗೆ ಜರುಗಿದ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನಡುವಿನ ಸೌಹಾರ್ದಭರಿತ ಭೇಟಿಯು ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ...