SC/ST ಮೀಸಲಾತಿ: ಬಳ್ಳಾರಿಯಲ್ಲಿ ಶ್ರೀರಾಮುಲು ಗೆ ಅದ್ದೂರಿ ಸ್ವಾಗತ..
SC/ ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ನಂತರ ಬಳ್ಳಾರಿಗೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲುಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಬಳ್ಳಾರಿಯ ಚಳ್ಳಗುರ್ಕಿ ದೇವಸ್ಥಾನದಲ್ಲಿ ಸಚಿವ ಶ್ರೀರಾಮುಲು ವಿಶೇಷ ಪೂಜೆಸಲ್ಲಿಸಿದರು.
ನಂತರ ಮಾತನಾಡಿದ ಶ್ರೀರಾಮುಲು, “ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಹೆಚ್ಚಳ ಮಾಡಿ ಹಿಂದುಳಿದ ಸಮಾಜಕ್ಕೆ ಬೆಂಬಲವಾಗಿ ನಿಂತಿದ್ದಾರೆ. ವಾಲ್ಮೀಕಿ ಸ್ವಾಮೀಜಿಗಳು ಮೀಸಲಾತಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸರ್ವ ಪಕ್ಷಗಳ ಸಲಹೆ ಪಡೆದು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ರಾಜಕೀಯ ಲಾಭ ಆಗುತ್ತೆ ಅಂತಾ ಮೀಸಲಾತಿ ಹೆಚ್ಚಳ ಮಾಡಿಲ್ಲ” ಎಂದು ಶ್ರೀ ರಾಮುಲು ಹೇಳಿದರು.
ಮೀಸಲಾತಿ ಹೆಚ್ಚಳದಿಂದ ಸಮುದಾಯ ಜನರಿಗೆ ಶೈಕ್ಷಣಿಕ. ಉದ್ಯೋಗದಲ್ಲಿ ಲಾಭ ದೊರೆಯಲಿದೆ. ಬಿಜೆಪಿ ಸರ್ಕಾರ ವಾಲ್ಮೀಕಿ ಜಯಂತಿ ಮಾಡಿದೆ. ವಾಲ್ಮೀಕಿ ಸಮುದಾಯ ಭವನ ಮಾಡಿದೆ. ಸಚಿವಾಲಯ ಮಾಡಿದೆ. ಆಯೋಗ ರಚನೆ ಮಾಡಿದೆ ಎಂದು ತಿಳಿಸಿದರು.
ಮೀಸಲಾತಿ ವಿಚಾರದಲ್ಲಿ ನನಗೆ ಗೇಲಿ ಮಾಡಿದ್ರು . ಹಿಯಾಳಿಸಿದ್ರು. ಮೀಸಲಾತಿ ಕೊಡಿಸಲು ಆಗಲ್ಲ ಹುಚ್ಚು ಹಿಡಿದಿದೇಯ್ಯಾ ಅಂತಾ ಹಿಯಾಳಿಸಿದ್ರು. 2016 ರಲ್ಲಿ ಸಿದ್ದರಾಮಯ್ಯ ಅಹಿಂದ ಮುಖವಾಡ ಹಾಕಿ ಲಾಭ ಪಡೆದುಕೊಂಡರು. ಸಿದ್ದರಾಮಯ್ಯರಿಗೂ ಸಹ ಮೀಸಲಾತಿ ಕೊಡಿಸಲು ಆಗಲಿಲ್ಲ. ನಾನು ತಾಳ್ಮೆಯನ್ನ ಕಳೆದುಕೊಳ್ಳದೇ ಮೀಸಲಾತಿ ಕೊಡಿಸಲು ಹೋರಾಟ ಮಾಡಿದ್ದೇನೆ. ನಾನು ಕೊಟ್ಟ ಮಾತು ಈಡೇರಿಸಿದ್ದೇನೆ. ಕೆಲಸದ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದು ತಿಳಿಸಿದರು.
SC/ST Reservation: Sriramulu gets grand welcome in Bellary..