ಸೂಪರ್-12 ಗುಂಪಿಗೆ ಲಗ್ಗೆಯಿಟ್ಟ ಸ್ಕಾಟ್ಲೆಂಡ್
ಓಮನ್ : ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಸೂಪರ್ 12 ಗುಂಪಿಗೆ ಲಗ್ಗೆಯಿಟ್ಟಿದೆ.
ಗ್ರೂಪ್ ಬಿ ಪಂದ್ಯದಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ ಓಮನ್ ಕ್ರಿಕೆಟ್ ತಂಡವನ್ನು ಎಂಟು ವಿಕೆಟ್ ಗಳ ಅಂತರದಿಂದ ಸೋಲಿಸುವ ಮೂಲಕ ಐಸಿಸಿ ಸೂಪರ್-12 ಎಂಟ್ರಿ ಪಡೆದಿದೆ.
ಪಂದ್ಯದಲ್ಲಿ ಟಾಸ್ ಸೋತು ಬೌಲಿಂಗ್ ಮಾಡಿದ ಸ್ಕಾಟ್ಲೆಂಡ್ ಕೇವಲ 122 ರನ್ ಗಳಿಗೆ ಓಮನ್ ತಂಡವನ್ನು ಆಲೌಟ್ ಮಾಡಿತು.
ಓಮನ್ ಪರ ಅಕಿಬ್ ಇಲ್ಯಾಸ್ 37 ರನ್, ಝೀಶನ್ ಮಕ್ಸೂದ್ 34, ಮೊಹಮದ್ ನದೀಂ 25 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಬಾಲ ಬಿಚ್ಚಲಿಲ್ಲ.
ಸ್ಕಾಟ್ಲೆಂಡ್ ಪರ ಜೋಷ್ ಡಾವೆ 3 ವಿಕೆಟ್ ಪಡೆದರೆ ಸಫಯಾನ್ ಶರೀಫ್ ಹಾಗೂ ಮೈಖಲ್ ಲೀಸ್ಕ್ ತಲಾ ಎರಡು ವಿಕೆಟ್ ಪಡೆದರು.
ಇನ್ನು 122 ರನ್ ಬೆನ್ನಟ್ಟಿದ ಸ್ಕಾಟ್ಲೆಂಡ್ ಇನ್ನೂ 18 ಎಸೆತಗಳು ಬಾಕಿ ಇರುವಂತೆ ಕೇವಲ 17 ಓವರ್ ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು.
ಸ್ಕಾಟ್ಲೆಂಡ್ ನ ಕೈಲೆ ಕೋಯಿಟ್ಜರ್ 41 ರನ್, ರಿಚಿ ಬೆರಿಂಗ್ ಟನ್ 31 ರನ್ , ಮ್ಯಾಥ್ಯೂ ಕ್ರಾಸ್ 26 ರನ್, ಜಾರ್ಜ್ ಮುನ್ಸೆ 20 ರನ್ ಗಳಿಸಿದರು.