ಬೆಂಗಳೂರು: ರಾಜ್ಯಪಾಲರು (Thawarchand Gehlot) ಸಣ್ಣ ಕಾರಣಕ್ಕೂ ರಿಪೋರ್ಟ್ ಕೇಳುತ್ತಿದ್ದಾರೆ. ಅವರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವ ಕುರಿತು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಯಾರೋ ಓರ್ವ ವ್ಯಕ್ತಿ ಸಣ್ಣ ದೂರು ನೀಡಿದ್ದಾನೆ. ಸಿದ್ದರಾಮಯ್ಯ ಯಾವಾಗಲೂ ಕನ್ನಡದಲ್ಲಿ ಸಹಿ ಹಾಕುತ್ತಾರೆ. ಆದರೆ ಇಂಗ್ಲಿಷ್ನಲ್ಲಿ ಸಹಿ ಮಾಡಿದ್ದಾರೆ. ಅದಕ್ಕೆ ತನಿಖೆ ಮಾಡಿ ಅಂತ ದೂರು ಕೊಟ್ಟಿದ್ದಾನೆ. ಇದು ವಿಷಯನಾ? ಎಂದು ರಾಜ್ಯಪಾಲರನ್ನು ಪ್ರಶ್ನಿಸಿದ್ದಾರೆ.
ಸಹಿ ಕನ್ನಡದಲ್ಲಿ ಆದರು ಮಾಡಬಹುದು, ಇಂಗ್ಲಿಷ್ನಲ್ಲಿ ಬೇಕಾದರೂ ಮಾಡಬಹುದು. ಯಾವ ಭಾಷೆ ಬರುತ್ತೋ ಆ ಭಾಷೆಯಲ್ಲಿ ಸಹಿ ಮಾಡಬಹುದು. ನಾನು ಸಾಮಾನ್ಯವಾಗಿ ಕನ್ನಡದಲ್ಲಿ ಇರೋ ಡ್ರಾಪ್ಟ್ ಗಳಿಗೆ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಇಂಗ್ಲಿಷ್ನಲ್ಲಿ ಡ್ರಾಫ್ಟ್ ಇದ್ದರೆ, ಬೇರೆ ರಾಜ್ಯಗಳಿಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ ಇಂಗ್ಲಿಷ್ನಲ್ಲಿ ಸಹಿ ಮಾಡುತ್ತೇನೆ ಎಂದು ಗುಡುಗಿದ್ದಾರೆ.