ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭಾರತಕ್ಕೆ ಗಾಯದ ಸಮಸ್ಯೆ – ಪಂದ್ಯ ಶುರು ಮಾಡಲು ಮಳೆ ಸಮಸ್ಯೆ….

Mahesh M Dhandu by Mahesh M Dhandu
December 3, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಭಾರತಕ್ಕೆ ಗಾಯದ ಸಮಸ್ಯೆ – ಪಂದ್ಯ ಶುರು ಮಾಡಲು ಮಳೆ ಸಮಸ್ಯೆ….

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಇಶಾಂತ್ ಶರ್ಮಾ ಕಾನ್ಪುರ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಗಾಯಗೊಂಡಿರುವ ಕಾರಣ ಅವರು ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜಾ ಮೊದಲ ಟೆಸ್ಟ್ ವೇಳೆ ಬಲಗೈ ಪೆಟ್ಟುಮಾಡಿಕೊಂಡಿದ್ದಾರೆ.  ಸ್ಕ್ಯಾನ್ ನಂತರ ಅವರ ಭುಜದಲ್ಲಿ ಊತ ಇರುವುದು ಕಂಡು ಬಂದಿರುವುದರಿಂದ ಅವರಿಗೆ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ. ಹಾಗಾಗಿ ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ನಿಂದ ಹೊರಗುಳಿದಿದ್ದಾರೆ.

Related posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026
ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

March 20, 2026

ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ನ ಅಂತಿಮ ದಿನದಂದು ಫೀಲ್ಡಿಂಗ್ ಮಾಡುವಾಗ ಅಜಿಂಕ್ಯ ರಹಾನೆ ಎಡ ಮಂಡಿ ರಜ್ಜು ನಲ್ಲಿ ಸಣ್ಣ ಒತ್ತಡವನ್ನು ಅನುಭವಿಸಿದರು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮುಂಬೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ.

ಪಂದ್ಯದ ಟಾಸ್ ಬೆಳಿಗ್ಗೆ 9 ಗಂಟೆಗೆ ನಡೆಯಬೇಕಿತ್ತು,  ಆದರೆ ಮಳೆ ಮತ್ತು ಕಳಪೆ ಔಟ್ ಫೀಲ್ಡ್ ಕಾರಣ, ಟಾಸ್ ವಿಳಂಬವಾಗಲಿದೆ. ಅಂಪೈರ್ 10:30 ಕ್ಕೆ ಪಿಚ್ ಅನ್ನು ಪರಿಶೀಲಿಸಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಉಭಯ ತಂಡಗಳು ಮುಂಬೈನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿವೆ. ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಮುಂಬೈ ಟೆಸ್ಟ್ ನಿಂದ ಆಡುವ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಆದರೆ, ಮೊದಲ ದಿನ ಮಳೆಯಾಗುವ ಸಾಧ್ಯತೆ ಇದ್ದು, ವರದಿಗಳ ಪ್ರಕಾರ ಮಳೆಯಿಂದಾಗಿ ಮೊದಲ ದಿನದ ಇಡೀ ಆಟವೇ ಹಾಳಾಗುವ ಸಾಧ್ಯತೆ ಇದೆ.

ಮುಂಬೈನಲ್ಲಿ  ಯೆಲ್ಲೋ ಅಲರ್ಟ್

ಹವಾಮಾನ ಇಲಾಖೆ ಮುಂಬೈಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಮುಂಬೈನಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಬುಧವಾರವೂ ದಿನವಿಡೀ ಮಳೆ ಸುರಿದಿದ್ದರಿಂದ ಉಭಯ ತಂಡಗಳಿಗೂ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಗುರುವಾರ ಕೂಡ ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ಎರಡೂ ತಂಡಗಳು ಬಾಂದ್ರಾ ಕುರ್ಲಾದಲ್ಲಿ ಒಳಾಂಗಣ ಅಭ್ಯಾಸ ನಡೆಸಿದವು.

ವಾಂಖೆಡೆಯಲ್ಲಿ 9 ವರ್ಷಗಳ ಕಾಲ ಭಾರತ ಸೋತಿರಲಿಲ್ಲ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಒಟ್ಟು 25 ಟೆಸ್ಟ್ ಪಂದ್ಯಗಳನ್ನಾಡಿದ್ದು, 11ರಲ್ಲಿ ಗೆದ್ದು 7ರಲ್ಲಿ ಸೋತಿದೆ. ಈ ಮೈದಾನದಲ್ಲಿ ಕೊನೆಯ ಬಾರಿಗೆ 2016 ರಲ್ಲಿ ಟೆಸ್ಟ್ ಪಂದ್ಯ ನಡೆದಿದ್ದು, ಭಾರತ ತಂಡ ಇಂಗ್ಲೆಂಡ್ ಅನ್ನು ಇನಿಂಗ್ಸ್ ಮತ್ತು 36 ರನ್‌ಗಳಿಂದ ಸೋಲಿಸಿತ್ತು. ವಿಶೇಷವೆಂದರೆ ಕಳೆದ 9 ವರ್ಷಗಳಿಂದ ಭಾರತ ತಂಡ ಈ ಮೈದಾನದಲ್ಲಿ ಅಜೇಯವಾಗಿದೆ. 2012 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು.

 

ಕಿವೀಸ್ ತಂಡವು ವಾಂಖೆಡೆಯಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ವೇಳೆ ತಂಡ 1 ಪಂದ್ಯ ಗೆದ್ದು 1 ಪಂದ್ಯ ಸೋತಿದೆ. 1988ರಲ್ಲಿ ಈ ಮೈದಾನದಲ್ಲಿ ನಡೆದ ಟೆಸ್ಟ್ ನಲ್ಲಿ NZ 136 ರನ್‌ಗಳಿಂದ ಜಯಗಳಿಸಿತ್ತು.

ಎರಡೂ ತಂಡಗಳು-

ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಕೆ.ಎಸ್.ಭರತ, ಪ್ರಸಿದ್ಧ ಕೃಷ್ಣ.

NZ: ಕೇನ್ ವಿಲಿಯಮ್ಸನ್ (c), ಟಾಮ್ ಲ್ಯಾಥಮ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (WK), ವಿಲ್ ಯಂಗ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಕೈಲ್ ಜೇಮಿಸನ್, ವಿಲಿಯಂ ಸೋಮರ್ವಿಲ್ಲೆ, ಅಯಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ಮಿಚೆಲ್ ಸ್ಯಾಂಟ್ನರ್ ರಚಿನ್ ರವೀಂದ್ರ.

Tags: indiakarnatakasaakshaatvtest
ShareTweetSendShare
Join us on:

Related Posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

by Shwetha
March 20, 2026
0

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram