ಭಾರತಕ್ಕೆ ಗಾಯದ ಸಮಸ್ಯೆ – ಪಂದ್ಯ ಶುರು ಮಾಡಲು ಮಳೆ ಸಮಸ್ಯೆ….
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಇಶಾಂತ್ ಶರ್ಮಾ ಕಾನ್ಪುರ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಗಾಯಗೊಂಡಿರುವ ಕಾರಣ ಅವರು ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜಾ ಮೊದಲ ಟೆಸ್ಟ್ ವೇಳೆ ಬಲಗೈ ಪೆಟ್ಟುಮಾಡಿಕೊಂಡಿದ್ದಾರೆ. ಸ್ಕ್ಯಾನ್ ನಂತರ ಅವರ ಭುಜದಲ್ಲಿ ಊತ ಇರುವುದು ಕಂಡು ಬಂದಿರುವುದರಿಂದ ಅವರಿಗೆ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ. ಹಾಗಾಗಿ ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ನಿಂದ ಹೊರಗುಳಿದಿದ್ದಾರೆ.
ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ನ ಅಂತಿಮ ದಿನದಂದು ಫೀಲ್ಡಿಂಗ್ ಮಾಡುವಾಗ ಅಜಿಂಕ್ಯ ರಹಾನೆ ಎಡ ಮಂಡಿ ರಜ್ಜು ನಲ್ಲಿ ಸಣ್ಣ ಒತ್ತಡವನ್ನು ಅನುಭವಿಸಿದರು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮುಂಬೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ.
ಪಂದ್ಯದ ಟಾಸ್ ಬೆಳಿಗ್ಗೆ 9 ಗಂಟೆಗೆ ನಡೆಯಬೇಕಿತ್ತು, ಆದರೆ ಮಳೆ ಮತ್ತು ಕಳಪೆ ಔಟ್ ಫೀಲ್ಡ್ ಕಾರಣ, ಟಾಸ್ ವಿಳಂಬವಾಗಲಿದೆ. ಅಂಪೈರ್ 10:30 ಕ್ಕೆ ಪಿಚ್ ಅನ್ನು ಪರಿಶೀಲಿಸಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಉಭಯ ತಂಡಗಳು ಮುಂಬೈನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿವೆ. ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಮುಂಬೈ ಟೆಸ್ಟ್ ನಿಂದ ಆಡುವ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಆದರೆ, ಮೊದಲ ದಿನ ಮಳೆಯಾಗುವ ಸಾಧ್ಯತೆ ಇದ್ದು, ವರದಿಗಳ ಪ್ರಕಾರ ಮಳೆಯಿಂದಾಗಿ ಮೊದಲ ದಿನದ ಇಡೀ ಆಟವೇ ಹಾಳಾಗುವ ಸಾಧ್ಯತೆ ಇದೆ.
ಮುಂಬೈನಲ್ಲಿ ಯೆಲ್ಲೋ ಅಲರ್ಟ್
ಹವಾಮಾನ ಇಲಾಖೆ ಮುಂಬೈಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಮುಂಬೈನಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಬುಧವಾರವೂ ದಿನವಿಡೀ ಮಳೆ ಸುರಿದಿದ್ದರಿಂದ ಉಭಯ ತಂಡಗಳಿಗೂ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಗುರುವಾರ ಕೂಡ ಒದ್ದೆಯಾದ ಔಟ್ಫೀಲ್ಡ್ನಿಂದಾಗಿ ಎರಡೂ ತಂಡಗಳು ಬಾಂದ್ರಾ ಕುರ್ಲಾದಲ್ಲಿ ಒಳಾಂಗಣ ಅಭ್ಯಾಸ ನಡೆಸಿದವು.
ವಾಂಖೆಡೆಯಲ್ಲಿ 9 ವರ್ಷಗಳ ಕಾಲ ಭಾರತ ಸೋತಿರಲಿಲ್ಲ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಒಟ್ಟು 25 ಟೆಸ್ಟ್ ಪಂದ್ಯಗಳನ್ನಾಡಿದ್ದು, 11ರಲ್ಲಿ ಗೆದ್ದು 7ರಲ್ಲಿ ಸೋತಿದೆ. ಈ ಮೈದಾನದಲ್ಲಿ ಕೊನೆಯ ಬಾರಿಗೆ 2016 ರಲ್ಲಿ ಟೆಸ್ಟ್ ಪಂದ್ಯ ನಡೆದಿದ್ದು, ಭಾರತ ತಂಡ ಇಂಗ್ಲೆಂಡ್ ಅನ್ನು ಇನಿಂಗ್ಸ್ ಮತ್ತು 36 ರನ್ಗಳಿಂದ ಸೋಲಿಸಿತ್ತು. ವಿಶೇಷವೆಂದರೆ ಕಳೆದ 9 ವರ್ಷಗಳಿಂದ ಭಾರತ ತಂಡ ಈ ಮೈದಾನದಲ್ಲಿ ಅಜೇಯವಾಗಿದೆ. 2012 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿತ್ತು.
ಕಿವೀಸ್ ತಂಡವು ವಾಂಖೆಡೆಯಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ವೇಳೆ ತಂಡ 1 ಪಂದ್ಯ ಗೆದ್ದು 1 ಪಂದ್ಯ ಸೋತಿದೆ. 1988ರಲ್ಲಿ ಈ ಮೈದಾನದಲ್ಲಿ ನಡೆದ ಟೆಸ್ಟ್ ನಲ್ಲಿ NZ 136 ರನ್ಗಳಿಂದ ಜಯಗಳಿಸಿತ್ತು.
ಎರಡೂ ತಂಡಗಳು-
ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಕೆ.ಎಸ್.ಭರತ, ಪ್ರಸಿದ್ಧ ಕೃಷ್ಣ.
NZ: ಕೇನ್ ವಿಲಿಯಮ್ಸನ್ (c), ಟಾಮ್ ಲ್ಯಾಥಮ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (WK), ವಿಲ್ ಯಂಗ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಕೈಲ್ ಜೇಮಿಸನ್, ವಿಲಿಯಂ ಸೋಮರ್ವಿಲ್ಲೆ, ಅಯಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ಮಿಚೆಲ್ ಸ್ಯಾಂಟ್ನರ್ ರಚಿನ್ ರವೀಂದ್ರ.