ದ್ವಿತೀಯ ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ತಯಾರಿ..??
ಈ ಪಠ್ಯಪುಸ್ತಕ ಹೊಣೆಗಾರಿಕೆ ರೋಹಿತ್ ಚಕ್ರತೀರ್ಥಗೆ..??
ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರಬರೆದ ಶಿಕ್ಷಣ ಸಚಿವರು..??
‘ರಿಜೆಕ್ಟ್ ಬ್ರಾಹ್ಮಿಣ್ ಟೆಕ್ಸ್ಟ್‌ಬುಕ್ಸ್’ ಎಂಬುದಾಗಿ ಟ್ವಿಟ್ಟರ್ ನಲ್ಲಿ ಟ್ರೆಂಡ್
ಬೆಂಗಳೂರು : ಪ್ರಾಥಮಿಕ, ಪ್ರೌಢ ಶಾಲೆಯ ಪಠ್ಯ ಪುಸ್ತಕ ಪರಿಸ್ಕರಣೆಯ ಬಳಿಕ ಇದೀಗ ದ್ವಿತೀಯ ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿರೋ ಮಾಹಿತಿ ಸಿಕ್ಕಿದೆ..
ಅಷ್ಟೇ ಅಲ್ದೇ ಈ ಪಠ್ಯಪುಸ್ತಕ ಹೊಣೆಗಾರಿಕೆಯನ್ನು ಕೂಡ ರೋಹಿತ್ ಚಕ್ರತೀರ್ಥ ವಹಿಸುವಂತೆ ಶಿಕ್ಷಣ ಸಚಿವರೇ ದು ಸೂಚಿಸಿದ್ದಾರೆ ಎನ್ನಲಾಗ್ತಿದ್ದು ಸಾಹಿತಿಗಳಿಂದ ಭಾರೀ ವಿರೋಧ ವ್ಯಕ್ತವಾಗ್ತಿದೆ..
ಶಿಕ್ಷಣ ತಜ್ಞ ಅಲ್ಲದ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕರ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.. ಮತ್ತೊಂದೆಡೆ ರಿಜೆಕ್ಟ್ ಬ್ರಾಹ್ಮಿಣ್ ಟೆಕ್ಸ್ಟ್‌ಬುಕ್ಸ್ ಎಂದೂ ಸಹ ಟ್ರೆಂಡ್ ಆಗ್ತಿದೆ..








