ಮೀರತ್ : ಸಂಬಳ ಕೇಳಿದ ಮಹಿಳಾ ಶಿಕ್ಷಕರಿಗೆ ಶಿಕ್ಷಣ ಸಂಸ್ಥೆ ಮಾಲೀಕರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಯುಪಿಯ ಮೀರತ್ ನ ಸರ್ದಾರ್ ಬಜಾರ್ ನಲ್ಲಿ ರಿಷಬ್ ಅಕಾಡೆಮಿ ಸ್ಕೂಲ್ ಅನ್ನು ಲಾಕ್ ಡೌನ್ ಹಿನ್ನೆಲೆ ಮುಚ್ಚಲಾಗಿತ್ತು.
ಹೀಗಾಗಿ ಅದರಲ್ಲಿ ಕೆಲಸ ಮಾಡುವ ಕೆಲ ಮಹಿಳಾ ಶಿಕ್ಷಕಿಯರು ತಮಗೆ ಬರಬೇಕಿದ್ದ ಸಂಬಳ ನೀಡುವಂತೆ ಸಂಸ್ಥೆಯ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಆದ್ರೆ ಆ ಶಿಕ್ಷಣ ಸಂಸ್ಥೆಯ ಸೆಕ್ರಟರಿಯಾಗಿದ್ದ ರಂಜಿತ್ ಜೈನ್ ಹಾಗೂ ಆತನ ಮಗ ಅಭಿನವ್ ಜೈನ್ ಸಂಬಳ ನೀಡದೇ ಸತಾಯಿಸಿದ್ದಾರೆ.
ಅಲ್ಲದೆ ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ಸ್ಪೈ ಕ್ಯಾಮೆರಾ ಇಟ್ಟಿರುವುದಾಗಿ ಅದರ ದೃಶ್ಯಾವಳಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಗಾಬರಿಗೊಂಡ ಮಹಿಳಾ ಶಿಕ್ಷಕಿಯರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಶೌಚಾಲಯದಲ್ಲಿನ ವಿಡಿಯೋಗಳನ್ನು ತೋರಿಸಿದ್ದ ರಂಜಿನ್ ಮತ್ತು ಆತನ ಪುತ್ರ ಮಹಿಳಾ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತ ಅಸಭ್ಯವಾಗಿ ವರ್ತಿಸುತ್ತಿದ್ದರಂತೆ.
ಒಂದು ವೇಳೆ ಅವರು ಹೇಳಿದಾಗೇ ಕೇಳದಿದ್ದರೇ ಬ್ಲಾಕ್ ಮ್ಯಾಜಿಕ್ ಮಾಡಿಸಿ ಸಾಯಿಸುತ್ತೇವೆ ಎಂದೂ ಕೂಡ ಬೆದರಿಕೆ ಹಾಕಿದ್ದಾರೆಂದು ಕೆಲ ಶಿಕ್ಷಕಿಯರು ಆರೋಪಿಸಿದ್ದಾರೆ.