ಬೆಂಗಳೂರು: ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಬಿಜೆಪಿಯಲ್ಲಿಯೇ ಆಂತರಿಕ ಕಚ್ಚಾಟ ಶುರುವಾದಂತೆ ಕಾಣುತ್ತಿದೆ. ರಾಜ್ಯ ಬಿಜೆಪಿಯಲ್ಲಿ (BJP) ಈಗ ಗೌಪ್ಯ ಸಭೆಗಳು ನಡೆಯುತ್ತಿವೆ.
ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ (Kumar Bangarappa) ನಿವಾಸದಲ್ಲಿ ಅತೃಪ್ತರು ಸಭೆ ನಡೆಸಿದ್ದಾರೆ. ಆದರೆ, ಅತೃಪ್ತರು ನಾವೆಲ್ಲ ಊಟ ಮಾಡುವುದಕ್ಕಾಗಿ ಸೇರಿದ್ದೇವು. ಇದು ಸಭೆಯಲ್ಲ ಎಂದಿದ್ದಾರೆ. ಈ ಮಧ್ಯೆ ಇಂದಿನ ಪ್ರತಿಭಟನೆಗೆ ವಿಜಯೇಂದ್ರ (BY Vijayendra) ಏಕೆ ಹೋಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ ಎನ್ನುವ ಮೂಲಕ ಯತ್ನಾಳ್ (Basangouda Patil Yatnal) ಕುತೂಹಲ ಮೂಡಿಸಿದ್ದಾರೆ.
ಹಿಂದೂ ಸಮಾಜದ ಎಲ್ಲ ವರ್ಗದವರ ಸಂಘಟನೆ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರ ಕೇವಲ ಮುಸ್ಲಿಂ ಜನಾಂಗದವರ ಓಲೈಕೆ ಮಾಡುತ್ತಿದ್ದಾರೆ. ನಾವು ಆರ್‌ಸಿಬಿ ಅಂತ ಏನೂ ಹೆಸರು ಇಟ್ಟಿಲ್ಲ. ರಾಣಿ ಚೆನ್ನಮ್ಮ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಅಂತ ಸೀಮಿತಗೊಳಿಸಿಲ್ಲ. ಈಶ್ವರಪ್ಪ ನಮ್ಮ ಹಿರಿಯ ನಾಯಕರು.
ಅವರ ಮನೆಗೆ ಚಹಾ ಕುಡಿಯಲು ಹೋಗಿದ್ದೆವು. ಅವರನ್ನು ಉಚ್ಚಾಟನೆ ಮಾಡಿದ್ದು ಮುಂದೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಇಂದಿನ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಚಂದ್ರಪ್ಪ, ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಸಿದ್ದೇಶ್ವರ್ ಸೇರಿದಂತೆ ಹಲವರಿದ್ದರು.