ಬೆಂಗಳೂರಲ್ಲಿ ಕೊರೊನಾ ಮಹಾಸ್ಫೋಟ : ಇಂದಿನಿಂದ ಸೆಕ್ಷನ್ 144 ಜಾರಿ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಜಾರಿ ಬರುವಂತೆ ನಗರಾದ್ಯಂತ ಸೆಕ್ಷನ್ 144 ಜಾರಿಮಾಡಲಾಗುವುದು ಎಂದು ತಿಳಿದುಬಂದಿದೆ.
ಬೆಂಗಳೂರು ನಗರದಾದ್ಯಂತ ಸೆಕ್ಷನ್ 144 ಜಾರಿ ಮಾಡಿ ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸಲು ಈಗಾಗಲೇ ಹೊರಡಿಸಿರುವ ಕೋವಿಡ್ ಶಿಷ್ಟಾಚಾರ ಜಾರಿಯಲ್ಲಿದೆ. ಇದಕ್ಕೆ ಪೂರಕವಾಗಿ ಇಂದಿನಿಂದ ಏಪ್ರಿಲ್ 21 ರ ವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ನಗರದಲ್ಲಿ ಯಾವುದೇ ಗುಂಪು ಅಥವಾ ಸಂಘಟನೆಗಳು ಪ್ರತಿಭಟನೆ, ಧರಣಿ, ಮುಷ್ಕರ ನಡೆಸುವಂತಿಲ್ಲ.
ಜನರು ಗುಂಪು ಗೂಡುವಂತಿಲ್ಲ, ಧಾರ್ಮಿಕ ಸ್ಥಳಗಳಲ್ಲಿ ಗುಂಪು ಪ್ರಾರ್ಥನೆ, ಕಾರ್ಯಕ್ರಮಗಳಲ್ಲಿ ಹೆಚ್ಚು ಜನರ ಭಾಗಿಯಾಗುವಂತಿಲ್ಲ.
ಶೇ.50ರಷ್ಟು ಜನರನ್ನು ಒಳಗೊಂಡು ಈಜು ಕೊಳ, ಜಿಮ್ ನಿರ್ವಹಿಸುವಂತೆಯೂ ಸೂಚಿಸಲಾಗಿದೆ. ಅಲ್ಲದೇ ಶೇ.50ರಷ್ಟು ಜನರೊಂದಿಗೆ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ನ ಆಸನ ವ್ಯವಸ್ಥೆಗೂ ಆದೇಶಿಸಿದ್ದಾರೆ.
ಇದರ ಜೊತೆಗೆ ನಗರದ ಮಿತಿಯಲ್ಲಿರುವ ಅಪಾಟ್ಮೆರ್ಂಟ್ / ವಸತಿ ಸಂಕೀರ್ಣಗಳಲ್ಲಿ ಈಜುಕೊಳ, ಜಿಮ್ನಾಷಿಯಂ, ಪಾರ್ಟಿ ಹಾಲ್ಸ್ ಮುಂತಾದ ಸೌಲಭ್ಯಗಳ ಕಾರ್ಯಾಚರಣೆಯನ್ನು ನಿಷೇಧಿಸಿ” ಆದೇಶಿಸಲಾಗಿದೆ.
