ವಲಸೆ ಕಾರ್ಮಿಕರಿಗೆ ಆಹಾರ ವಿತರಿಸಿದ ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್… ಕ್ರಿಕೆಟ್ ಮೈದಾನದಲ್ಲಿ ಸದ್ದು ಮಾಡುತ್ತಿದ್ದಂತೆ ಮೈದಾನದ ಹೊರಗೆ ಕೂಡ ಸೆಹ್ವಾಗ್ ಸದಾ ಸುದ್ದಿಯಲ್ಲಿರುತ್ತಾರೆ. ಮುಖ್ಯವಾಗಿ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಸೆಹ್ವಾಗ್ ಅವರ ಪ್ರತಿಯೊಂದು ಪೋಸ್ಟರ್ಗಳು ವೈರಲ್ ಸುದ್ದಿಯಾಗುತ್ತವೆ.
ವೃತ್ತಿಪರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ಸೆಹ್ವಾಗ್, ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಕೊರೋನಾ ವೈರಸ್ ನಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆ ನೂರಾರು ದಾಟುತ್ತಿದೆ. ಹೀಗಾಗಿ ಯಾವುದೇ ಚಟುವಟಿಕೆಗಳು ಕೂಡ ನಡೆಯುತ್ತಿಲ್ಲ. ಮುಖ್ಯವಾಗಿ ವಲಸೆ ಕಾರ್ಮಿಕರು ಮುಂದೆನು ಅಂತ ಯೋಚನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ಸೆಹ್ವಾಗ್ ಎಲ್ಲರಂತೆ ತಾನು ಕೂಡ ಕೊರೋನಾ ವೈರಸ್ ಟೈಮ್ ನಲ್ಲಿ ಜನರ ನೆರವಿಗೆ ಧಾವಿಸಿದ್ದಾರೆ. ತನ್ನ ಮನೆಯಲ್ಲಿ ತಾನೇ ಅಡುಗೆ ಮಾಡಿ, ಪಾರ್ಸೆಲ್ ಬಾಕ್ಸ್ ನಲ್ಲಿ ವಲಸೆ ಕಾರ್ಮಿಕರಿಗೆ ಹಂಚುತ್ತಿದ್ದಾರೆ. ಈ ಫೋಟೋ ವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕೊಂಡಿದ್ದಾರೆ. ಅಲ್ಲದೆ
ತಾವೇ ಕೈಯಾರೆ ಅಡುಗೆ ಮಾಡಿ, ಪಾರ್ಸೆಲ್ ಬಾಕ್ಸ್ ನಲ್ಲಿ ಹಾಕೊಂಡು ವಲಸೆ ಕಾರ್ಮಿಕರಿಗೆ ಹಂಚುವುದರಲ್ಲಿ ಏನೋ ಒಂದು ತೃಪ್ತಿ ಇದೆ ಅಂತ ಟ್ಯಾಗ್ ಲೈನ್ ಕೂಡ ಹಾಕಿದ್ದಾರೆ. ಸೆಹ್ವಾಗ್ ಅವರ ಈ ಕಾರ್ಯಕ್ಕೆ ಹರ್ಭಜನ್ ಸಿಂಗ್ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.








