ಕಂಪನಿಗಳ ಲೋಗೋ, ಚಿಹ್ನೆ ಬಳಸಿ ನಕಲಿ ಉತ್ಪನ್ನ ಮಾರಾಟ – ಇಬ್ಬರ ಬಂಧನ..  

1 min read

ಕಂಪನಿಗಳ ಲೋಗೋ, ಚಿಹ್ನೆ ಬಳಸಿ ನಕಲಿ ಉತ್ಪನ್ನ ಮಾರಾಟ – ಇಬ್ಬರ ಬಂಧನ..  

ದೊಡ್ಡ ದೊಡ್ಡ ಬ್ರ್ಯಾಂಡ್ ಕಂಪನಿಗಳ  ಲೋಗೋ  ಬಳಸಿ ನಕಲಿ ಉತ್ಪನ್ನಗಳನ್ನು  ಮಾರಾಟ ಮಾಡುತ್ತಿದ್ದವರ  ಅಡ್ಡಾ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ನಿತ್ಯ ಬಳಕೆ ಮಾಡುವ ಟೀ ಪುಡಿ, ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಸೇರಿ ಹಲವಾರು ಬ್ರ್ಯಾಂಡ್ ಕಂಪನಿಗಳ  ನಕಲಿ ಉತ್ಪನ್ನಗಳನ್ನ ತಯಾರು ಮಾಡುತ್ತಿದ್ದವರ ಮೇಲೆ  ರಾಯಚೂರು  ಜಿಲ್ಲೆಯ ಸಿರವಾರ ಪೊಲೀಸರು  ದಾಳಿ ನಡೆಸಿ, ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಸಿರವಾರ ತಾಲೂಕಿನ ಬಾಲಾಜಿ ಕ್ಯಾಂಪ್  ಬಳಿ ನಕಲಿ ವಸ್ತುಗಳ ತಯಾರು ಮಾಡಲಾಗುತ್ತಿತ್ತು.

ಪೊಲೀಸರು ಸದ್ಯ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಲಕ್ಷಾಂತರ ನಕಲಿ ವಸ್ತುಗಳು ಪತ್ತೆಯಾಗಿವೆ. ಬಂಧಿತ ಇಬ್ಬರು ಸಿರವಾರದ ಗೋದಾಮಿನಲ್ಲಿ ಕೆಲಸ ಮಾಡಿಕೊಂಡಿದ್ದರು. ರತನ್ ಸಿಂಗ್ ಮತ್ತು ರಾಘವೇಂದ್ರ ಬಂಧಿತರು.

ನಕಲಿ ಉತ್ಪನ್ನಗಳನ್ನ ತಯಾರಿಸಿ ಗ್ರಾಮೀಣ ಭಾಗಕ್ಕೆ ತೆರಳಿ ಮಾರಾಟ ಮಾಡುತ್ತಿದ್ರು. ಇದರ ಹಿಂದೆ ಹೈದರಾಬಾದ್​ ಮೂಲದ ವ್ಯಕ್ತಿಯ ಕೈವಾಡ ಇರುವುದು ತಿಳಿದು ಬಂದಿದೆ  ಆತನೇ ಈ ದಂಧೆಯ ಕಿಂಗ್ ಪಿನ್. ಸದ್ಯ ಈತನ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd