ಷೇರು ಮಾರುಕಟ್ಟೆಯಲ್ಲಿ ಸೆನ್ಸಕ್ಸ್ ಕುಸಿತ Saaksha Tv
ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಇಳಿಕೆಕಂಡಿದ್ದು, ಬಿಎಸ್ಇ ಸೆನ್ಸೆಕ್ಸ್ 953.00 ಅಂಕಗಳಷ್ಟು ಇಳಿಕೆಯಾಗಿದೆ.
ಬಿಎಸ್ಇ ವಹಿವಾಟು 58,016.76 ಮಟ್ಟದಲ್ಲಿ ವಹಿ ವಾಟು ನಡೆಸುತ್ತಿದೆ. ಅಂತೆಯೇ ನಿಫ್ಟಿ 50 ಸೂಚ್ಯಂಕವು 270 ಅಂಕಗಳ ಕುಸಿತದೊಂದಿಗೆ ಋಣಾತ್ಮಕವಾಗಿ ವಹಿವಾಟು ಮುಂದುವರಿಸಿದ್ದು, 17,340 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಸೆನ್ಸೆಕ್ಸ್ ಪ್ಯಾಕ್ನಲ್ಲಿ ಇನ್ಫೋಸಿಸ್ ಟಾಪ್ ಲೂಸರ್ ಆಗಿದ್ದು, ಶೇಕಡಾ 2 ರಷ್ಟು ಕುಸಿದಿದೆ. ನಂತರ ವಿಪ್ರೋ, ಟೆಕ್ ಮಹೀಂದ್ರಾ, ಹೆಚ್ಸಿಎಲ್ ಟೆಕ್, ಹೆಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಎಂ ಅಂಡ್ ಎಂ ಮತ್ತು ಬಜಾಜ್ ಫಿನ್ಸರ್ವ್, ಜೊಮ್ಯಾಟೊ ಷೇರುಗಳು ಸಹ ಶೇ.6ರಷ್ಟು ಕುಸಿದು ಹೆಚ್ಚಿನ ನಷ್ಟ ಅನುಭವಿಸಿವೆ.
ಆದರೆ ಸೆನ್ಸೆಕ್ಸ್ ಪ್ಯಾಕ್ನಲ್ಲಿ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಲಾರ್ಸೆನ್ & ಟೂಬ್ರೊ (ಎಲ್ & ಟಿ), ನೆಸ್ಲೆ ಇಂಡಿಯಾ, ವಿಪ್ರೋ, ಟೈಟಾನ್ ಕಂಪನಿ, ಎಚ್ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಬೆಳಗಿನ ವಹಿವಾಟಿನಲ್ಲಿ ಅಗ್ರಸ್ಥಾನದಲ್ಲಿವೆ. ಇಂಡಸ್ಇಂಡ್ ಬ್ಯಾಂಕ್ ಮಾತ್ರ ಶೇಕಡಾ 0.5 ಕ್ಕಿಂತ ಹೆಚ್ಚಿನ ಲಾಭದೊಂದಿಗೆ ಹೆಚ್ಚಿನ ವಹಿವಾಟು ನಡೆಸುತ್ತಿದೆ.