ಅಲಾಸ್ಕಾ : ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ಶಾಸಕ ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಕೆನಾಯ್ ಪೆನಿನ್ಸುಲಾದ ನಗರದ ಸೋಲ್ಡೊಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ನಡೆದಿದೆ.
ಮೃತರನ್ನು ಪೈಲಟ್ ಗ್ರೆಗೊರಿ ಬೆಲ್, ಮಾರ್ಗದರ್ಶಿ ಡೇವಿಡ್ ರೋಜರ್ಸ್ ಮತ್ತು ದಕ್ಷಿಣ ಕೆರೊಲಿನಾ ಸಂದರ್ಶಕರಾದ ಕ್ಯಾಲೆಬ್ ಹಲ್ಸಿ, ಹೀದರ್ ಹಲ್ಸಿ, ಮ್ಯಾಕೆ ಹಲ್ಸಿ ಮತ್ತು ಕಸ್ರ್ಟಿನ್ ರೈಟ್ ಎಂದು ಗುರುತಿಸಲಾಗಿದೆ. ಇನ್ನೊಂದು ವಿಮಾನದಲ್ಲಿ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.
ಇನ್ನು ಎರಡು ವಿಮಾನಗಳು ಅವಶೇಷ ಬಂದು ಕೆನಾಯ್ ಪೆನಿನ್ಸುಲಾದ ನಗರದ ಹೆದ್ದಾರಿಯಲ್ಲಿ ಬಿದ್ದವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಪಘಾತವಾದ ವಿಮಾನಗಳಲ್ಲಿ ಒಂದನ್ನು ಡಿ ಹ್ಯಾವಿಲ್ಯಾಂಡ್ ಡಿಹೆಚ್ ಸಿ-2 ಬೀವರ್ ಎಂದು ಗುರುತಿಸಲಾಗಿದೆ.