ಉತ್ತರಪ್ರದೇಶದ ಏಳು ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆ Uttar Pradesh byelection
ಲಕ್ನೋ, ನವೆಂಬರ್03: ಉತ್ತರಪ್ರದೇಶದ ಏಳು ವಿಧಾನಸಭಾ ಸ್ಥಾನಗಳಲ್ಲಿ ಇಂದು ಉಪಚುನಾವಣೆ ನಡೆಯಲಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾನೂನು ಸುವ್ಯವಸ್ಥೆ ನಿಭಾಯಿಸುವ ಬಗ್ಗೆ ಅನೇಕ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. Uttar Pradesh byelection
ಇದರಲ್ಲಿ ಇತ್ತೀಚಿಗೆ ನಡೆದ ವಿಕಾಸ್ ದುಬೆಯ ಎನ್ಕೌಂಟರ್ ಹತ್ಯೆ ಮತ್ತು ಹತ್ರಾಸ್ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಘಟನೆಯು ಸೇರಿದೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಗಳಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಆದರೆ ಹಾಲಿ ಶಾಸಕರ ಸಾವಿನ ಬಳಿಕ ಆ ಸ್ಥಾನ ತೆರವಾಗಿತ್ತು.
ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಹಳ್ಳಿಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಖಾಲಿ ಬಿದ್ದ ಉನ್ನಾವೊದ ಬಂಗರ್ಮೌ ವಿಧಾನಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ. ಮತದಾರ ಯಾರ ಪರ ತೀರ್ಪು ನೀಡಲಿದ್ದಾನೆ ಎಂಬ ನಿರೀಕ್ಷೆಗೆ ಕಾರಣವಾಗಿದೆ.
ಮಥುರಾ ದೇವಸ್ಥಾನದಲ್ಲಿ ನಮಾಜ್ – ಪ್ರಕರಣ ದಾಖಲು
ಅದರಲ್ಲೂ ಅತ್ಯಾಚಾರ ಪ್ರಕರಣವು ಕುಲದೀಪ್ ಸೆಂಗಾರ್ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ವಿವಾದಾತ್ಮಕ ಮತ್ತು ಪ್ರಬಲ ಮಾಜಿ ಶಾಸಕರ ವಿರುದ್ಧ ಬಿಜೆಪಿ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ ಸದ್ಯ ಕೇಸ್ ನ್ಯಾಯಾಲಯದ ಕಟಕಟೆಯಲ್ಲಿದ್ದು ಮೇಲ್ನೋಟಕ್ಕೆ ಅತ್ಯಾಚಾರ ಪ್ರಕರಣ ರುಜುವಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.
ಭಾನುವಾರ, ಪೂರ್ವ ಉತ್ತರಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಲವ್ ಜಿಹಾದ್ ಬಗ್ಗೆ ಮಾತನಾಡಿದ್ದು, ಧಾರ್ಮಿಕ ಮತಾಂತರದ ಕುರಿತು ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಲವ್ ಜಿಹಾದ್ ನಡೆಸುವವರಿಗೆ ಎಚ್ಚರಿಕೆ ನೀಡಿದ್ದರು.
ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿಯ ಬಹುಜನ ಸಮಾಜ ಪಕ್ಷ ಕೂಡ ಎಲ್ಲಾ ಏಳು ಸ್ಥಾನಗಳಿಗೆ ಈ ಬಾರಿ ಅಭ್ಯರ್ಥಿಗಳನ್ನು ಇರಿಸಿದೆ.
ಮಾಯಾವತಿ, ಪ್ರಚಾರಕ್ಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಂಗಳವಾರ ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ