ವಿಶ್ವಸಂಸ್ಥೆಗೆ ಸೇರಿದ ಕಾರಿನಲ್ಲಿ ಜೋಡಿಯೊಂದು ಸೆಕ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ವಿಶ್ವ ಸಂಸ್ಥೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಅದೊಂದು ತುಂಬ ಶಾಕಿಂಗ್ ಹಾಗೂ ಮನಸನ್ನು ಕ್ಷೋಭೆಗೆ ದೂಡುವ ದೃಶ್ಯ ಎಂದು ಹೇಳಿದೆ.
ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ವಿಶ್ವ ಸಂಸ್ಥೆಯ ಟ್ರುಸ್ ಸುಪರ್ ವಿಸನ್ ಆರ್ಗನೈಸೇಶನ್ ಗೆ ಸೇರಿದ ಕಾರಿನಲ್ಲಿ ಜೋಡಿಯೊಂದು ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. 18 ಸೆಕೆಂಡ್ ಗಳ ವಿಡಿಯೋದಲ್ಲಿ, ತಲೆಯ ಮೇಲೆ ಕೂದಲಿಲ್ಲದ ವ್ಯಕ್ತಿ ಡ್ರೈವಿಂಗ್ ಸೀಟ್ ನಲ್ಲಿ ಕುಳಿತದ್ದಾನೆ. ಆತನ ಹಿಂದಿನ ಸೀಟಿನಲ್ಲಿ ಮತ್ತೋರ್ವ ವ್ಯಕ್ತಿ ಕುಳಿತಿದ್ದಾನೆ. ಈತನ ತೊಡೆಯ ಮೇಲೆ ಕೆಂಪು ಬಣ್ಣದ ಡ್ರೆಸ್ ಹಾಕಿರುವ ಯುವತಿ ಕುಳಿತಿದ್ದಾಳೆ. ಇಬ್ಬರೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ವಿಡಿಯೋದಲ್ಲಿ ಕಾಣಿಸುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.
ಬಿಬಿಸಿ ವರದಿಯ ಪ್ರಕಾರ ಈ ವಿಡಿಯೋ ಚಿತ್ರೀಕರಣ ಆಗಿದ್ದು, ಇಸ್ರೇಲ್ ನ ಟೆಲ್ ಅವಿವ್ ಸಿಟಿಯ ಸಮುದ್ರ ತೀರವೊಂದರ ಸಮೀಪದಲ್ಲಿ.
ಇನ್ನು ಈ ವಿಡಿಯೋ ವಿಚಾರವಾಗಿ ವಿಶ್ವಸಂಸ್ಥೆಯ ವಕ್ತಾರ ಸ್ಟಿಫನ್ ಡುಜಾರಿಕ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ನಮ್ಮ ಸಂಸ್ಥೆಯ ಕಾರು ಹೀಗೆ ದುರ್ಬಳಕೆ ಆಗುತ್ತಿರುವುದನ್ನು ನೋಡಿ ತುಂಬ ಬೇಸರವಾಯಿತು. ಈ ಬಗ್ಗೆ ಕೂಡಲೇ ತನಿಖೆ ಪ್ರಾರಂಭಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.