ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಓರ್ವ ಕಾವಲುಗಾರನನ್ನು ಬಂಧಿಸಿದ್ದಾರೆ.
ಕಾವಲುಗಾರ ಆಕೆಯ ಮಾರ್ಫ್ ಮಾಡಿದ ಚಿತ್ರಗಳೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ವ್ಯಕ್ತಿ ಅದೇ ಶಾಲೆಯಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ. ಈತ ಅಪ್ರಾಪ್ತಳೊಂದಿಗೆ ಸ್ನೇಹ ಬೆಳೆಸಿ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದ. ಕಾವಲುಗಾರ ಹುಡುಗಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಮತ್ತು ಆಕೆಯ ಚಿತ್ರಗಳನ್ನು ಪಡೆದು, ಬ್ಲ್ಯಾಕ್ ಮೇಲ್ ಮಾಡಲು ಮಾರ್ಫ್ ಮಾಡಿದ್ದ. ವಿರೂಪಗೊಳಿಸಿದ ಫೋಟೋಗಳನ್ನು ಎಲ್ಲೆಡೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಸದ್ಯ ಕುಟುಂಬಸ್ಥರು ಈ ಕುರಿತು ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.