ಅಪ್ರಾಪ್ತೆಗೆ ಕಣ್ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟವನಿಗೆ 1 ವರ್ಷ ಜೈಲು..!

1 min read

ಅಪ್ರಾಪ್ತೆಗೆ ಕಣ್ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟವನಿಗೆ 1 ವರ್ಷ ಜೈಲು..!

ಮುಂಬೈ : ಮುಂಬೈನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಗೆ ಕಣ್ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟು ಚುಡಾಯಿಸುತ್ತಿದ್ದ ಆರೋಪಿಗೆ ಪೋಕ್ಸೋ ಕಾಯ್ದೆಯಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

2020ರ ಫೆಬ್ರವರಿಯಲ್ಲಿ 14 ವರ್ಷದ ಹುಡುಗಿ ಈ ಬಗ್ಗೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಬಳಿಕ ಬಾಲಕಿ ಪೋಷಕರು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ರು. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡಿದ್ರು.

ಕೋರ್ಟ್ ಹುಡುಗಿ, ಆಕೆಯ ತಾಯಿ ಮತ್ತು ಪೊಲೀಸರ ಹೇಳಿಕೆಯನ್ನೇ ಸಾಕ್ಷಿಯಾಗಿ ಪರಿಗಣಿಸಿ, ಆರೋಪಿಗೆ 1 ವರ್ಷ ಜೈಲು ಶಿಕ್ಷೆ ನೀಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd