ದಕ್ಷಿಣ ಕನ್ನಡ: ಸಾರಿಗೆ ಸಂಸ್ಥೆಯ (KSRTC) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಪರಿಚತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದ ಮುರ ಗ್ರಾಮದ ಹತ್ತಿರ ನಡೆದಿದೆ.
ಯುವತಿಯೊಬ್ಬಳು ಕೆಎ 17 ಎಫ್ 1293 ನೋಂದಣಿಯ ಬಸ್ ನಲ್ಲಿ ತಾಯಿಯೊಂದಿಗೆ ಸುಮಾರಿಗೆ ಪುತ್ತೂರಿಗೆ ಪ್ರಯಾಣಿಸುತ್ತಿದ್ದಳು. ಈ ಸಂದರ್ಭದಲ್ಲಿ ಯುವತಿಯ ಹಿಂದೆ ಕುಳಿತಿದ್ದ ಅಪರಿಚಿತ ವ್ಯಕ್ತಿ ನನ್ನನ್ನು ಮುಟ್ಟಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ಅಪರಿಚಿತ ವ್ಯಕ್ತಿ ಪದೇ ಪದೇ ಕಾಲಿನಿಂದ ಮುಟ್ಟುವುದು. ತನ್ನ ಕೈಗಳನ್ನು ಸೀಟ್ ಗಳ ಮಧ್ಯೆ ಇಟ್ಟು ಸೊಂಟದ ಕೆಳಗೆ ಮುಟ್ಟಿದ್ದಾನೆ. ನಂತರ ಆತ ಪುತ್ತೂರಿನ ಬೊಳ್ವಾರ ಬಳಿ ಇಳಿದಿದ್ದಾನೆ ಎಂದು ಯುವತಿ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.








