RCB ಆಟಗಾರನಿಗೆ ಸಿಗುತ್ತಾ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಚಾನ್ಸ್…
ಬಾಂಗ್ಲಾದೇಶ ಪ್ರವಾಸದಿಂದ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಹೊರಗುಳಿಯುವ ಸಾಧ್ಯತೆ ಇದೆ. ರವೀಂದ್ರ ಜಡೇಜಾ ಇನ್ನೂ ಸಂಪೂರ್ಣವಾಗಿ ಫಿಟ್ ಆಗದ ಕಾರಣ ತಂಡದ ಮ್ಯಾನೆಜ್ಮೆಂಟ್ ಮೈದಾನಕ್ಕೆ ಇಳಿಸದಿರಲು ನಿರ್ಧರಿಸಿದೆ.
ಬಾಂಗ್ಲಾದೇಶ ಪ್ರವಾಸದ ವೇಳೆ ರವೀಂದ್ರ ಜಡೇಜಾ ಹೊರ ನಡೆದರೆ, ಶಹಬಾಜ್ ಅಹ್ಮದ್ಗೆ ತಂಡ ಸೇರಿಕೊಳ್ಳಬಹುದು. ಈಗಾಗಲೇ ತಂಡದಲ್ಲಿ ಮೂವರು ಸ್ಪಿನ್ನರ್ ಗಳಿದ್ದು ಇನ್ನೊಬ್ಬರಿಗೆ ಅವಕಾಶ ಸಿಗುತ್ತದಾ ಕಾದು ನೋಡಬೇಕಿದೆ.
ಕಳೆದ ತಿಂಗಳು, ಬಾಂಗ್ಲಾದೇಶ ಪ್ರವಾಸಕ್ಕಾಗಿ ರವೀಂದ್ರ ಜಡೇಜಾ ಅವರ ಹೆಸರನ್ನ ಪ್ರಕಟಿಸಿದಾಗ , ಇದು ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ಹೇಳಿತ್ತು. ಆದರೂ ಆಡಳಿತ ಮಂಡಳಿ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ. ಆದರೆ ಮೂಲಗಳ ಪ್ರಕಾರ, ಏಷ್ಯಾಕಪ್ನಿಂದ ಹೊರಗುಳಿದಿರುವ 33 ವರ್ಷದ ಜಡೇಜಾ ಇನ್ನೂ ಪೂರ್ಣ ಫಿಟ್ ಆಗಿಲ್ಲ. ಭಾರತ ತಂಡಕ್ಕೆ ಮತ್ತೆ ಸೇರ್ಪಡೆಗೊಳ್ಳಲು ಅವಕಾಶ ನೀಡುವ ಮೊದಲು ಅವರು ಸಂಪೂರ್ಣ ಫಿಟ್ ಆಗಿರಬೇಕು ಎಂದು ಮಂಡಳಿ ಬಯಸುತ್ತದೆ.
ಸದ್ಯ ಶಹಬ್ಬಾಸ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಬಾಂಗ್ಲಾದೇಶ ಪ್ರವಾಸಕ್ಕೆ ಅವಕಾಶ ಸಿಕ್ಕರೆ ಸಿದ್ಧರಾಗಿ ಎಂದು ಹೇಳಲಾಗಿದೆ ಎನ್ನಲಾಗುತ್ತಿದೆ.
ಭಾರತ ತಂಡ ಡಿಸೆಂಬರ್ 4 ರಿಂದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಆರಂಭಿಸಲಿದೆ. ಸರಣಿಯ ಮೊದಲ ಪಂದ್ಯ ಮೀರ್ಪುರದಲ್ಲಿ ನಡೆಯಲಿದೆ. ಉಳಿದ ಎರಡು ಪಂದ್ಯಗಳು ಡಿಸೆಂಬರ್ 7 ಮತ್ತು 10 ರಂದು ನಡೆಯಲಿದೆ. ಇದರ ನಂತರ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14 ರಿಂದ ಮತ್ತು ಎರಡನೇ ಪಂದ್ಯ ಡಿಸೆಂಬರ್ 22 ರಿಂದ ನಡೆಯಲಿದೆ.
Shahbaz Ahmed: RCB player getting chance in series against Bangladesh