ಮಿಲಿಯನ್ ಡಾಲರ್ಸ್ ಪ್ರಶ್ನೆಗೆ ಉತ್ತರ “ಬುಮ್ರಾ ಸ್ಥಾನಕ್ಕೆ ಶಮಿ”
ಗಾಯದಿಂದಾಗಿ ಟಿ 20 ವಿಶ್ವಕಪ್ ತಂಡದಿಂದ ದೂರವಾಗಿರುವ ಜಸ್ ಪ್ರಿತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಮೊಹ್ಮದ್ ಶಮಿ ಅವರನ್ನು ಟಿ 20 ವಿಶ್ವಕಪ್ ತಂಡಕ್ಕೆ ಸ್ಟಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದರು.
ಆದ್ರೆ ಬುಮ್ರಾ ಅವರು ಗಾಯಗೊಂಡ ಕಾರಣ ಅವರ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟುಕೊಂಡಿತ್ತು.
ಇದೀಗ ಬುಮ್ರಾ ಸ್ಥಾನಕ್ಕೆ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಮೊಹ್ಮದ್ ಸಿರಾಜ್ ಮತ್ತು ಶರ್ದೂಲ್ ಠಾಕೂರ್ ಅವರನ್ನು ಬ್ಯಾಕ್ ಅಪ್ ಆಟಗಾರರಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಶಮಿ ಆಯ್ಕೆಯೊಂದಿಗೆ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಲೈನ್ ಅಪ್ ಈಗ ಮೊಹ್ಮದ್ ಶಮಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್ ದೀಪ್ ಸಿಂಗ್ ಅವರನ್ನು ಒಳಗೊಂಡಿದೆ.
ಇನ್ನು ಟಿ 20 ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡ ಹೀಗಿದೆ : ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹ್ಮದ್ ಶಮಿ.





