ಸಿಡಿಲ ಮರಿ ಪಂತ್ ಮೇಲೆ ಪ್ರಶಂಸೆಗಳ ಸುರಿಮಳೆ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರದ ಆಟದ ಮೂಲಕ ಎಲ್ಲರ ಗಮನ ಸೆಳೆದ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಬಗ್ಗೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರಿಜ್ ಶಂಷಿ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಅಕ್ಷಶಃ ಆಫ್ರಿಕಾ ಬೌಲರ್ ಗಳಿಗೆ ಕಬ್ಬಿಣದ ಕಡಲೆಯಾಗಿದ್ದರು.
ಈ ಪಂದ್ಯದಲ್ಲಿ 71 ಎಸೆತಗಳನ್ನು ಎದುರಿಸಿದ ಪಂತ್, 10 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 85 ರನ್ ಚಚ್ಚಿದರು.
ಅಂತಿಮವಾಗಿ ಪಂತ್ ಆಫ್ರಿಕಾ ಸ್ಪಿನ್ನರ್ ತಬ್ರೇಯಿಜ್ ಷಂಶಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಶಂಷಿ ಪಂತ್ ಭುಜ ತಟ್ಟಿ ವೆಲ್ ಪ್ಲೇಯ್ಡ್ ಎಂದರು.
ಇದಾದ ಬಳಿಕ ಆ ಫೋಟೋವನ್ನು ಹಂಚಿಕೊಂಡಿರುವ ಶಂಷಿ , ತುಂಬಾ ಕಷ್ಟಪಟ್ಟೆ.. ಚೆನ್ನಾಗಿ ಆಡಿದೆ.. ಗೆರೆ ದಾಟಿಲ್ಲ..” ಎಂದು ತಮ್ಮದೇ ಶೈಲಿಯಲ್ಲಿ ಶೀರ್ಷಿಕೆ ಕೊಟ್ಟಿದ್ದಾರೆ.
ಇದಲ್ಲದೇ ರಿಷಬ್ ಪಂತ್ ಬ್ಯಾಟಿಂಗ್ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









