Shankar nag
ಲೆಜೆಂಡರಿ ನಟ ‘ಕರಾಟೆ ಕಿಂಗ್’ ಶಂಕರ್ ನಾಗ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಶಂಕ್ರಣ್ಣನ 66ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜ್ಯಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಾಗೆಯೇ ರಾಜಕಾರಣಿಗಳು, ಸಿನಿಮಾ ತಾರೆಯರು ಸಹ ‘ಸಾಂಗ್ಲಿಯಾನ’ ನನ್ನ ಸ್ಮರಿಸಿದ್ದಾರೆ.
“ಆಟೋರಾಜ”ನಮ್ಮನ್ನ ಅಗಲಿ 30 ವರ್ಷಗಳೇ ಕಳೆದಿವೆ. ಆದ್ರೆ ಇಂದಿಗೂ ಶಂರ್ ನಾಗ್ ಅವರು ಸಿನಿಮಾಗಳ ಮೂಲಕ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಅಭಿಮಾನಿಗಳ ಆರಾಧ್ಯದೈವವಾಗಿದ್ದಾರೆ. ಇಂತಹ ಮೇರು ನಟನನ್ನ ಸ್ಮರಿಸಿ ಅನೇಕರು ಟ್ವೀಟ್ ಮಾಡಿದ್ದಾರೆ.
‘ಶಂಕ್ರಣ್ಣನ ಜನ್ಮದಿನದ ಸವಿ ನೆನಪು’ – ಕಿಚ್ಚ ಸುದೀಪ್
ಶಂಕರ್ ನಾಗ್ ಅವರ “ಆಟೋರಾಜ”ನ ಫೋಟೋವನ್ನ ಶೇರ್ ಮಾಡಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿಕ್ಕದಾಗಿ ಭಾವಪಪೂರ್ಣವಾಗಿ ‘ಶಂಕ್ರಣ್ಣನ ಜನ್ಮದಿನದ ಸವಿ ನೆನಪು’ “ಎಲ್ಲರಿಗೂ ಹೀರೋ” ಎಂದು ಅಡಿಬರಹ ಕೊಟ್ಟಿದ್ದಾರೆ.
ನಮ್ಮ ಕನ್ನಡ ಚಿತ್ರರಂಗದ ಶ್ರೇಷ್ಠ ನಟ – ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
“ನಮ್ಮ ಕನ್ನಡ ಚಿತ್ರರಂಗದ ಶ್ರೇಷ್ಠ ನಟ, ನಿರ್ದೇಶಕ ಮತ್ತು ಸ್ಪೂರ್ತಿಯ ಚಿಲುಮೆ ಶಂಕರ್ ನಾಗ್ ಸರ್ ಅವರ ಜನ್ಮದಿನದ ಸವಿನೆನಪು” ಎಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಟ್ವೀಟ್ ಮೂಲಕ ‘ಕರಾಟೆ ಕಿಂಗ್’ ಅವರನ್ನ ಸ್ಮರಿಸಿದ್ದಾರೆ.
“ಲೆಜೆಂಡ್” – ಡಾಲಿ ಧನಂಜಯ್
ಧನಂಜಯ್ ಸಹ ಶಂಕರ್ ನಾಗ್ ಅವರನ್ನು ಸ್ಮರಿಸಿದ್ದಾರೆ. ಶಂಕರ್ ನಾಗ್ ಅವರ ಫೋಟೋ ಶೇರ್ ಮಾಡಿ, “ಲೆಜೆಂಡ್” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹಾರ್ಟ್ ಇಮೋಜಿಯನ್ನು ಹಾಕಿದ್ದಾರೆ.
ಶಂಕರ್ ಅಣ್ಣ ಸದಾ ಜೀವಂತ – ನಿರ್ದೇಶಕ ಸಂತೋಶ್ ಆನಂದ್ ರಾಮ್
ಇನ್ನೂ ಸ್ಯಾಂಡಲ್ ವುಡ್ ನಿರ್ದೇಶಕ ಸಂತೋಶ್ ಆನಂದ್ ರಾಮ್ ಅವರು ಶಂಕರ್ ನಾಗ್ ಫೋಟೋ ಶೇರ್ ಮಾಡಿ ಶಾರ್ಟ್ ಅಂಡ್ ಸ್ವೀಟ್ ಆಗಿ ಟ್ವೀಟ್ ಮಾಡಿ “ ಶಂಕರ್ ಅಣ್ಣ ಸದಾ ಜೀವಂತ….” ಎಂದು ಬರೆದುಕೊಂಡಿದ್ದಾರೆ.
ಕನ್ನಡದ ಮರೆಯದ ಮಾಣಿಕ್ಯ ಶಂಕರಣ್ಣ: ‘ಸಾಂಗ್ಲಿಯಾನ’ನ ನೆನೆದ ಕರುನಾಡು..!
‘ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ’- ನಟ ಹಾಗೂ ರಾಜಕಾರಣಿ ಬಿ ಸಿ ಪಾಟೀಲ್
‘ಕೌರವ’ ರಾಗಿ ಗುರುತಿಸಿಕೊಂಡಿರುವ ಸಚಿವ ಬಿ ಸಿ ಪಾಟೀಲ್ ಅವರು ಸಹ ಶಂಕರ್ ನಾಗ್ ಅವರನ್ನ ಸ್ಮರಿಸಿದ್ದಾರೆ. “ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಬರಹಗಾರ, ರಂಗಕರ್ಮಿ ಹಾಗೂ ಕೋಟ್ಯಂತರ ಸಿನಿರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದ ದಿವಂಗತ ಶ್ರೀ ಶಂಕರನಾಗ್ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ನಮನಗಳು” ಎಂದು ಟ್ವೀಟ್ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಜೊತೆ ‘ಪಂಚತಂತ್ರ’ ಸುಂದರಿ, ಇನ್ನೂ ಇಬ್ಬರು ನಾಯಕಿಯರು..?
Shankar nag
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel