ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ನಿರ್ದೇಶಕ ಶಂಕರ್ ಅಳಿಯನ ವಿಚಾರಣೆ
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಸ್ಟಾರ್ ನಿರ್ದೇಶಕ ಶಂಕರ್ ಅಳಿಯನಿಗೆ ಸಂಕಷ್ಟ ಎದುರಾಗಿದೆ. ಶಂಕರ್ ಅಳಿಯ ರೋಹಿತ್ ನನ್ನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಹೌದು ಶಂಕರ್ ಭಾರೀತಿಯ ಸಿನಿಮಾರಂಗದ ಸ್ಟಾರ್ ನಿರ್ದೇಶರು. ರೋಬೋ, ಶಿವಾಜಿ, ಇಂಡಿಯನ್ , ಅನಿಯನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ ಶಂಕರ್.
16 ವರ್ಷದ ಕ್ರಿಕೆಟ್ ಆಟಗಾರ್ತಿಯೊಬ್ರು ಕ್ರಿಕೆಟ್ ತರಬೇತಿ ಕಾರ್ಯಾಗಾರದ ವೇಳೆ ಕೋಚ್ ತಾಮರೈ ಕಣ್ಣನ್ ವಿರುದ್ಧ ಕ್ರಿಕೆಟ್ ಬೋರ್ಡ್ ಗೆ ದೂರು ನೀಡಿದ್ದಾರೆ. ಕ್ರಿಕೆಟ್ ಕ್ಲಬ್ ನ ಸದಸ್ಯರು ದೂರನ್ನ ಗಂಭೀರವಾಗಿ ಪರಿಗಣಿಸದೇ, ಕೋಚ್ ಜೊತೆಗೆ ವಿವಾದ ಬೇಡ ಎಂದು ಹೇಳಿ ಕಳುಹಿಸಿದ್ದರಂತೆ. ಆದ್ರೆ ಇಷ್ಟಕ್ಕೇ ಸುಮ್ಮನಾಗದ ಬಾಲಕಿ ಮಹಿಳಾ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ. ನಂತರದಲ್ಲಿ ಮಹಿಳಾ ಕಲ್ಯಾಣ ಇಲಾಖೆ ಈ ಸಂಬಂಧ ಮೆಟ್ಟುಪಾಳಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಇನ್ನೂ ಮುಖ್ಯ ಕೋಚ್ ತಾಮರೈ , ಸಹ ಕೋಚ್ ಜಯಕುಮಾರ್ ,, ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ದಾಮೋದರನ್ ( ಶಂಕರ್ ಅಳಿಯ ರೋಹಿತ್ ತಂದೆ) , ಕಾರ್ಯದರ್ಶಿ ವೆಂಕಟ್ ಹಾಗೂ ಕ್ರಿಕೆಟ್ ತಂಡದ ನಾಯಕ ರೋಹಿತ್ ( ಶಂಕರ್ ಅಳಿಯ) ವಿರುದ್ಧ ದೂರು ನೀಡಲಾಗಿದೆ. ಇವರೆಲ್ಲರ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಅಂದ್ಹಾಗೆ ರೋಹಿತ್ ಪುದುಚೆರಿ ಕ್ರಿಕೆಟ್ ಅಸೋಸಿಯೇಷನ್ ನ ಮಾಲೀಕರಾಗಿದ್ದಾರೆ ಹಾಗೂ ಮಧುರೈ ಪ್ಯಾಂಥರ್ಸ್ ತಂಡದ ನಾಯಕ ಸಹ. ಇದೇ ವರ್ಷ ಜೂನ್ ನಲ್ಲಿ ಶಂಕರ್ ಪುತ್ರಿ ಐಶ್ವರ್ಯಾ ಜೊತೆಗೆ ರೋಹಿತ್ ಮದುವೆಯಾಗಿದ್ದರು.