ಮಾಲ್ಡಿವ್ಸ್ ಕಡಲ ಟೆಂಪರೇಚರ್ ಹೆಚ್ಚಿಸಿದ ಶಾನ್ವಿ
ಬೆಂಗಳೂರು : ನಟಿ ಶಾನ್ವಿ ಶ್ರೀವಾಸ್ತವ್ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ಕಾಲ ಕಳೆಯುತ್ತಿರುವ ಅವರ ಹಾಟ್ ಫೋಟೋಸ್ ಇದೀಗ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿವೆ.
ಮಾಲ್ಡಿವ್ಸ್ ನಲ್ಲಿ ಕಾಲ ಕಳೆಯುತ್ತಿರುವ ಫೋಟೊಗಳನ್ನು ಶಾನ್ವಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿವೆ. ನೆಟ್ಟಿಗರು ಶಾನ್ವಿಯ ಹಾಟ್ ಫೋಟೋಗಳಿಗೆ ಫಿದಾ ಆಗಿದ್ದು, ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಲಕ್ಷ್ಮೀ ಅವತಾರ ತಾಳಿದ್ದ ಶಾನ್ವಿ, ತಮ್ಮ ವಿಶಿಷ್ಟ ನಟನೆ ಮೂಲಕವೇ ಪ್ರೇಕ್ಷಕರನ್ನು ಸೆಳೆದಿದ್ದರು.
ಮಂಡ್ಯದ ಗಂಡು ಅಂಬರೀಶ್ ಗೆ ದೇವಾಲಯ ನಿರ್ಮಿಸುತ್ತಿರುವ ಅಭಿಮಾನಿಗಳು
ಇದೀಗ ಕಸ್ತೂರಿ ಮಹಲ್ ಹಾಗೂ ತ್ರಿಶೂಲಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಶೂಟಿಂಗ್ ನಿಂದ ಅವರಿಗೆ ಬಿಡುವು ಸಿಕ್ಕಿದ್ದು, ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.
ಅಲ್ಲಿನ ಕಡಲ ಕಿನಾರೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಶಾನ್ವಿ, ವಿಡಿಯೋ ಹಾಗೂ ಚಿತ್ರಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫುಟ್ ಪಾತ್ ನಲ್ಲಿ ಕುಳಿತು ಟೀ ಕುಡಿದ `ಸರಳತೆಯ ಸಾಹುಕಾರ’
ಕಸ್ತೂರಿ ಮಹಲ್ ಕನ್ನಡದಲ್ಲಿ ಚಂದ್ರಲೇಖ ಬಳಿಕ ಶಾನ್ವಿ ನಟಿಸುತ್ತಿರುವ ಎರಡನೇ ಹಾರರ್ ಚಿತ್ರ. ಈ ಚಿತ್ರವನ್ನು ದಿನೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel