Kalaburagi: ಅಕ್ರಮವಾಗಿ ಹಣ ಸಂಪಾದಿಸಲು ಬಿಜೆಜಿ, ಕಾರ್ಯಕರ್ತರಿಗೆ ಸ್ವತಃ ಹೇಳಿಕೊಟ್ಟಿದೆ : ಶರಣಪ್ರಕಾಶ್ ಪಾಟೀಲ್
1 min read
ಅಕ್ರಮವಾಗಿ ಹಣ ಸಂಪಾದಿಸಲು ಬಿಜೆಜಿ, ಕಾರ್ಯಕರ್ತರಿಗೆ ಸ್ವತಃ ಹೇಳಿಕೊಟ್ಟಿದೆ : ಶರಣಪ್ರಕಾಶ್ ಪಾಟೀಲ್
ಕಲಬುರಗಿ: ಅಕ್ರಮವಾಗಿ ಹಣ ಸಂಪಾದಿಸಲು ಬಿಜೆಜಿ, ಕಾರ್ಯಕರ್ತರಿಗೆ ಸ್ವತಃ ಹೇಳಿಕೊಟ್ಟಿದೆ ಎಂದು ಮಾಜಿ ಸಚಿವರಾದ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಶರಣಪ್ರಕಾಶ್ ಪಾಟೀಲ್ ಆರೋಪ ಮಾಡಿದರು.
ಕಲಬುರಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿಯಲ್ಲಿ ನಡೆದ ಅಕ್ರಮದ ಕುರಿತು ಮಾತನಾಡಿ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು. ದಿವ್ಯಾ ಹಾಗರಗಿ ಬಿಜೆಪಿ ಮಾಜಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದರು. ಜೊತೆಗೆ ಕರ್ನಾಟಕ ನಸಿರ್ಂಗ್ ಕೌನ್ಸಿಲ್ ಸದಸ್ಯರಿದ್ದಾರೆ. ಇಷ್ಟಿದ್ದರೂ ಸಹ ಹಗರಣ ಹೊರಬರುತ್ತಿದ್ದಂತೆ ದಿವ್ಯಾಗೂ ಬಿಜೆಪಿಗೂ ಸಂಬಂಧವಿಲ್ಲ ಅಂತಿದ್ದಾರೆ ಎಂದು ದೂರಿದರು.
ದಿವ್ಯಾ ಹಾಗರಗಿ ಅವರಿಗೆ ಸೇರಿದ ಜ್ಞಾನಜ್ಯೋತಿ ಶಾಲೆಗೆ ಯಾವ ಮಾನದಂಡದ ಮೇಲೆ ಪರೀಕ್ಷಾ ಕೇಂದ್ರವಾಗಿಸಲಾಗಿತ್ತು. ಕೆಲ ನಾಯಕರು ಒತ್ತಡ ಹಾಕುವ ಮುಖಾಂತರ ಪರೀಕ್ಷಾ ಕೇಂದ್ರ ಮಾಡಲಾಗಿದೆ. ಈ ಕೇಂದ್ರದ ಎಲ್ಲಾ ಅಭ್ಯರ್ಥಿಗಳ ಒಎಮ್‍ಆರ್ ಶೀಟ್ ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪಿಎಸ್‍ಐ ನೇಮಕಾತಿ ಹಗಣರವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕುವ ಯತ್ನ ಮಾಡುತ್ತಿದೆ. ಪ್ರಕರಣವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೂಲಕ ಸೂಕ್ತ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.