ADVERTISEMENT
Thursday, September 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸೌದಿ ಅರೇಬಿಯಾದಲ್ಲೂ ನಾನೇ ಫೇಮಸ್: ಆರ್ ಅಶೋಕ್ ವಿಪಕ್ಷ ನಾಯಕರಾಗುವ ಭವಿಷ್ಯ ನಾನೇ ನುಡಿದಿದ್ದೆ,ಸ್ವಾರ್ಥಕ್ಕಾಗಿ ದೇವಸ್ಥಾನಕ್ಕೆ ಹೋಗುವವನಲ್ಲ -ಇಸ್ಲಾಂ ಪರ ಹೇಳಿಕೆ ವಿವಾದಕ್ಕೆ ರಾಯರೆಡ್ಡಿ ವ್ಯಂಗ್ಯದ ತಿರುಗೇಟು

Shwetha by Shwetha
September 3, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಇತ್ತೀಚೆಗೆ ಇಸ್ಲಾಂ ಧರ್ಮದ ಕುರಿತು ನೀಡಿದ್ದ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ, ಇದೀಗ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ತಮ್ಮ ಧಾರ್ಮಿಕ ನಿಲುವು, ರಾಜಕೀಯ ಭವಿಷ್ಯ ಹಾಗೂ ವಿರೋಧ ಪಕ್ಷದ ನಾಯಕರ ಕುರಿತು ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಾವೆಂಬುದು ಸಹಜ ಅದಕ್ಕೆ ಹೆದರುವವನಲ್ಲ ನಾನು

Related posts

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

ರೆಸಾರ್ಟ್‌ನಲ್ಲಿ ಕುಳಿತು ಪರೀಕ್ಷೆ ಬರೆದರಾ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳು? ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದವರಾರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ ಹೆಚ್‌ಡಿಕೆ

September 3, 2026
ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ದೆಹಲಿಯಲ್ಲಿ ಬಸ್ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮ

ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ದೆಹಲಿಯಲ್ಲಿ ಬಸ್ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮ

September 3, 2026

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಅಮರಯ್ಯ ಎಂಬುವವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಾವು ಎಂಬುದು ಮನುಷ್ಯನಿಗೆ ಅತ್ಯಂತ ಸಹಜ ಪ್ರಕ್ರಿಯೆ. ಅದು ಇಂದು ಬರಬಹುದು ಅಥವಾ ನಾಳೆ ಬರಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಸಾವಿಗೆ ಹೆದರುವ ವ್ಯಕ್ತಿಯಲ್ಲ ಎಂದು ದೃಢವಾಗಿ ಹೇಳಿದರು. ಇತ್ತೀಚಿನ ಟೀಕೆಗಳು ಮತ್ತು ವಾಗ್ದಾಳಿಗಳ ನಡುವೆಯೂ ತಮ್ಮ ಆತ್ಮವಿಶ್ವಾಸ ಕುಂದಿಲ್ಲ ಎಂಬುದನ್ನು ಅವರು ಈ ಮೂಲಕ ಸಾರಿದರು.

ಸೌದಿ ಅರೇಬಿಯಾ ಮತ್ತು ಇರಾನ್ ನಲ್ಲೂ ನನ್ನದೇ ಪ್ರಚಾರ

ತಮ್ಮ ಹೇಳಿಕೆಯನ್ನು ವಿವಾದ ಮಾಡಿದ ಮಾಧ್ಯಮಗಳಿಗೆ ವ್ಯಂಗ್ಯವಾಗಿಯೇ ಧನ್ಯವಾದ ಅರ್ಪಿಸಿದ ಸಚಿವರು, ನಾನು ಪ್ರಚಾರಕ್ಕಾಗಿ ಹೀಗೆ ಮಾತನಾಡಿದ್ದೇನೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಹೌದು, ಕಳೆದ ಎರಡು ದಿನಗಳಿಂದ ನನಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಚಾರ ಸಿಕ್ಕಿದೆ. ಸೌದಿ ಅರೇಬಿಯಾ, ಇರಾನ್ ಹಾಗೂ ಅಲ್ ಜಝೀರಾ ನ್ಯೂಸ್ ನಲ್ಲೂ ನನ್ನ ಬಗ್ಗೆ ಸುದ್ದಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಬಿಹಾರದ ಸಂಸದ ಡ್ಯಾನಿಶ್ ಅಲಿ ಮತ್ತು ಡಿಕೆ ಶಿವಕುಮಾರ್ ಅವರು ಕೂಡ ಫೋನ್ ಮಾಡಿ ಮಾತನಾಡಿದ್ದಾರೆ ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದರು.

ಆರ್ ಅಶೋಕ್ ಗೂಢಚಾರ

ಇದೇ ವೇಳೆ ಹಳೆಯ ನೆನಪೊಂದನ್ನು ಕೆದಕಿದ ರಾಯರೆಡ್ಡಿ, ನಾನು, ಲಕ್ಷ್ಮಣ ಸವದಿ ಮತ್ತು ಆರ್. ಅಶೋಕ್ ಸೇರಿ ವೈಷ್ಣವಿ ದೇವಿ ದರ್ಶನಕ್ಕೆ ಹೋಗಿದ್ದೆವು. ಅಂದು ಶಕ್ತಿ ಪೀಠದಲ್ಲಿದ್ದಾಗ ದೆಹಲಿಯ ಬಿಜೆಪಿ ನಾಯಕರು ಅಶೋಕ್ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತಾರೆ ಎಂಬ ಸುದ್ದಿ ನನಗೆ ಮೊದಲೇ ತಿಳಿದಿತ್ತು. ಆ ಕ್ಷಣದಲ್ಲೇ ನಾನು ಅಶೋಕ್ ಅವರಿಗೆ ಶುಭಾಶಯ ತಿಳಿಸಿದ್ದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ನಾನು ಮತಾಂತರವಾಗುವ ಪ್ರಶ್ನೆಯೇ ಇಲ್ಲ

ನಾನು ಸರ್ವ ಧರ್ಮಗಳು ಶ್ರೇಷ್ಠ ಎಂದು ಹೇಳಿದ್ದೇನೆಯೇ ಹೊರತು ಯಾರನ್ನೂ ನಿಂದಿಸಿಲ್ಲ. ಹಜ್ ಅಥವಾ ಉಮ್ರಾಗೆ ಹೋಗಲು ನಾನು ಮುಸ್ಲಿಂ ಅಲ್ಲ. ನಾನು ಬೇರೆ ಯಾವುದೇ ಧರ್ಮಕ್ಕೂ ಮತಾಂತರಗೊಳ್ಳುವ ವ್ಯಕ್ತಿಯೂ ಅಲ್ಲ. ನಾನು ಶರಣ ತತ್ವವನ್ನು ನಂಬುವವನು ಮತ್ತು ಆ ಹಾದಿಯಲ್ಲೇ ಸಾಗುವವನು ಎಂದು ಸ್ಪಷ್ಟಪಡಿಸಿದರು. ಜುಡಾಯಿಸಂ, ಜೈನಿಸಂ, ಬೌದ್ಧ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಿದ್ದೇನೆ. ಏಸು ಕ್ರಿಸ್ತನ ಸಮಾಧಿಗೂ ಭೇಟಿ ನೀಡಿ ಅಲ್ಲಿನ ಸಾರವನ್ನು ಅರಿತಿದ್ದೇನೆ ಎಂದರು.

ಸ್ವಾರ್ಥಕ್ಕಾಗಿ ದೇವಸ್ಥಾನದ ಮೆಟ್ಟಿಲು ಹತ್ತಲ್ಲ

ನನ್ನನ್ನು ಮಂತ್ರಿ ಮಾಡು ಅಥವಾ ಅಧಿಕಾರ ನೀಡು ಎಂದು ಕೇಳಿಕೊಳ್ಳಲು ನಾನು ದೇವಸ್ಥಾನಗಳಿಗೆ ಹೋಗುವುದಿಲ್ಲ ಅಥವಾ ಸ್ವಾಮೀಜಿಗಳ ಕಾಲು ಬೀಳುವುದಿಲ್ಲ. ದೇವರು ನಮ್ಮ ಮನಸ್ಸಿನಲ್ಲೇ ಇದ್ದಾನೆ. ನಾಡಿಗೆ ಮಳೆ ಬೆಳೆ ಚೆನ್ನಾಗಿ ಆಗಲಿ, ಜನರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಮಾತ್ರ ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಜನರೇ ನಮಗೆ ದೇವರು ಎಂದು ಹೇಳುತ್ತಾ, ಮಗಳು ಮತ್ತು ಹೆಂಡತಿಯ ಇಚ್ಛೆಯಂತೆ ಚಾಮುಂಡೇಶ್ವರಿ ದರ್ಶನಕ್ಕೆ ಮತ್ತು ಸುತ್ತೂರು ಮಠಕ್ಕೆ ಹೋಗುತ್ತಿರುವುದಾಗಿ ತಿಳಿಸಿದರು.

ShareTweetSendShare
Join us on:

Related Posts

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

ರೆಸಾರ್ಟ್‌ನಲ್ಲಿ ಕುಳಿತು ಪರೀಕ್ಷೆ ಬರೆದರಾ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳು? ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದವರಾರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ ಹೆಚ್‌ಡಿಕೆ

by Shwetha
September 3, 2026
0

ಬೆಂಗಳೂರು: ಕೆಪಿಎಸ್‌ಸಿ ಅಕ್ರಮದ ವಿಚಾರವಾಗಿ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಜಟಾಪಟಿ ಈಗ ತಾರಕಕ್ಕೇರಿದೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ...

ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ದೆಹಲಿಯಲ್ಲಿ ಬಸ್ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮ

ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ದೆಹಲಿಯಲ್ಲಿ ಬಸ್ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮ

by Shwetha
September 3, 2026
0

ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಸಂಚರಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪದ ಬೆನ್ನಲ್ಲೇ, ದೆಹಲಿ ಸರ್ಕಾರ ಹಾಗೂ ಸಾರಿಗೆ...

ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಿ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಿ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಿಕೆ

by Shwetha
September 3, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿರುವ 14ನೇ ಆರೋಪಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಬೆಂಗಳೂರಿನ 59ನೇ CCH ನ್ಯಾಯಾಲಯ ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

ಮಂಕಾದ ಮೋದಿ ಮ್ಯಾಜಿಕ್: ಮೋದಿಗೆ ಆಡಳಿತ ವಿರೋಧಿ ಅಲೆ ಭೀತಿ: ರಾಹುಲ್ ಗಾಂಧಿ ವರ್ಚಸ್ಸು ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿ ನುಡಿ ಮೂಡ್ ಆಫ್ ದಿ ನೇಷನ್ ಸರ್ವೇ!

ಮಂಕಾದ ಮೋದಿ ಮ್ಯಾಜಿಕ್: ಮೋದಿಗೆ ಆಡಳಿತ ವಿರೋಧಿ ಅಲೆ ಭೀತಿ: ರಾಹುಲ್ ಗಾಂಧಿ ವರ್ಚಸ್ಸು ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿ ನುಡಿ ಮೂಡ್ ಆಫ್ ದಿ ನೇಷನ್ ಸರ್ವೇ!

by Shwetha
September 3, 2026
0

ನವದೆಹಲಿ: ಕಳೆದ ಹತ್ತು ವರ್ಷಗಳಿಂದ ದೇಶದ ರಾಜಕಾರಣದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಬಿಜೆಪಿಯ ಅಶ್ವಮೇಧಕ್ಕೆ ಆಡಳಿತ ವಿರೋಧಿ ಅಲೆ ಬಿಸಿ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 3, 2026
0

ದಿನ ಭವಿಷ್ಯ: 03-09-2026 ಮೇಷ ರಾಶಿ ಸಾಮಾನ್ಯ ಭವಿಷ್ಯ: ಇಂದಿನ ದಿನ ನಿಮಗೆ ಅತ್ಯಂತ ಉತ್ಸಾಹದಾಯಕವಾಗಿರುತ್ತದೆ. ನಿಮ್ಮಲ್ಲಿನ ನಾಯಕತ್ವ ಗುಣಗಳು ಎದ್ದು ಕಾಣುವ ದಿನವಿದು. ಧಾರ್ಮಿಕ ಕಾರ್ಯಗಳಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram