“ತಮ್ಮ ಘನತೆ, ಗೌರವಕ್ಕೆ ತಕ್ಕಂತೆ ಮಾತನಾಡುವುದನ್ನ ಮೊದಲು ಕಲಿತುಕೊಳ್ಳಿ ಸಚಿವರೇ!!”
ಹೊಸಕೋಟೆ : “ತಮ್ಮ ಘನತೆ, ಗೌರವಕ್ಕೆ ತಕ್ಕಂತೆ ಮಾತನಾಡುವುದನ್ನ ಮೊದಲು ಕಲಿತುಕೊಳ್ಳಿ ಸಚಿವರೇ ಎಂದು ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ವಾಗ್ದಾಳಿ ನಡೆಸಿದ್ದಾರೆ.
ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಮತ್ತು ವಂಶದ ಬಗ್ಗೆ ಮಾತನಾಡುವ ಯೋಗ್ಯತೆ, ಅರ್ಹತೆ ನಿಮಗಿಲ್ಲ. ಸುಳ್ಳು ಆರೋಪ ಹೇಳುವುದರಲ್ಲಿ ನೀವು ನಿಸ್ಸೀಮರಂತ ತಿಳಿದಿರುವ ವಿಷಯ. ನಿಮ್ಮ ಸ್ವಂತ ಅಣ್ಣ ಪಿಳ್ಳಣ್ಣನವರು ಹೇಳಿರುವ ಹಾಗೇ ತಂದೆ-ತಾಯಿಗೆ ಊಟ ಹಾಕದ ನೀವು ನಿಮ್ಮ ಯೋಗ್ಯತೆ ಏನು ಅನ್ನುವುದನ್ನ ತಿಳಿಸುತ್ತದೆ ಎಂದು ಟೀಕಿಸಿದರು.
ಅಲ್ಲದೆ ಬಿ.ಎನ್. ಬಚ್ಚೇಗೌಡ ರವರ ಕುಟುಂದವರು ದಾನ ಧರ್ಮ ಮಾಡಿರುವ ವಿಚಾರ ತಾಲ್ಲೂಕಿನಾದ್ಯಂತ ಗೊತ್ತಿರುವುದಾಗಿದ್ದು, ನಿನಗೆ ಹೇಳುವ ಅವಶ್ಯಕತೆ ನಮಗಿಲ್ಲ. ಉದಾಹರಣೆ ಬೇಕಿದ್ದರೆ ಸುಮಾರಿದೆ, ಅದರಲ್ಲಿ ಹೊಸಕೋಟೆ ನಗರದ ಮದ್ಯದಲ್ಲಿರುವ 1 ಎಕರೆ ವಿಸ್ತೀರ್ಣದ 40-50 ಕೋಟಿ ವೆಚ್ಚದ ಟಿ.ಎ.ಪಿ.ಎಂ.ಎಸ್ ಸೊಸೈಟಿ ಕಟ್ಟಡ ನಿರ್ಮಿಸಿರುವ ಜಾಗ ತಿಳಿದಿಕೊಳ್ಳಿ ಎಂದು ಟಾಂಗ್ ನೀಡಿದರು.