ಪ್ರೇಯಸಿ ಮಿಥಾಲಿ ಜೊತೆ ಶಾರ್ದೂಲ್ ಎಂಗೇಜ್ ಮೆಂಟ್ Shardul saaksha tv
ಟೀಮ್ ಇಂಡಿಯಾದ ಆಲ್ರೌಂಡರ್, ಲಾರ್ಡ್ ಶಾರ್ದೂಲ್ ಅಂತಲೇ ಫೇಮಸ್ ಆಗಿರುವ ಶಾರ್ದೂಲ್ ಥಾಕೂರ್ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಪ್ರೇಯಸಿ ಮಿಥಾಲಿ ಪಾರೂಲ್ಕರ್ ಜೊತೆ ಶಾರ್ದೂಲ್ ಮದುವೆ ಫಿಕ್ಸ್ ಅಗಿದೆ.
ಮುಂಬೈನಲ್ಲಿ ಕೆಲವೇ ಕೆಲವು ಗಣ್ಯರ ಎದುರಿನಲ್ಲಿ ಶಾರ್ದೂಲ್ ಎಂಗೇಜ್ ಮೆಂಟ್ ನಡೆದಿದೆ.
ಶಾರ್ದೂಲ್ ಮದುವೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಬಳಿಕ ನಡೆಯಲಿದೆ.
ಟೀಮ್ ಇಂಡಿಯಾ ಪರ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಶಾರ್ದೂಲ್ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ.
https://www.instagram.com/reel/CW2W5v3j_Ln/?utm_source=ig_web_copy_link
15 ಏಕದಿನ ಕ್ರಿಕೆಟ್ ಪಂದ್ಯಗಳಲ್ಲೂ ಭಾರತ ತಂಡದ ಪರ ಆಡಿರುವ ಶಾರ್ದುಲ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲೂ 24 ಪಂದ್ಯಗಳನ್ನು ಆಡಿದ್ದಾರೆ.
ಐಪಿಎಲ್ನಲ್ಲಿ 61 ಪಂದ್ಯಗಳನ್ನು ಆಡಿ 67 ವಿಕೆಟ್ಗಳನ್ನು ಸಂಪಾದಿಸಿದ್ದಾರೆ.
2021ರ ಐಪಿಎಲ್ನಲ್ಲಿ ಶಾರ್ದೂಲ್ 21 ವಿಕೆಟ್ ಪಡೆದು ಸಿಎಸ್ಕೆ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.








