ಗೆಳತಿ ಮಿಥಾಲಿ ಪಾರುಲ್ಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾರ್ದುಲ್ ಠಾಕೂರ್…
ಕ್ರಿಕೆಟ್ ಲೋಕದಲ್ಲಿ ಇದೀಗ ಮದುವೆ ಸಂಭ್ರಮ. ಕೆಲದಿನಗಳ ಹಿಂದೆಯಷ್ಟೆ ಭಾರತ ಕ್ರಿಕೆಟ್ ತಂಡದ ಇಬ್ಬರು ಆಟಗಾರರಾದ ಕೆ ಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮತ್ತೊಬ್ಬ ಆಟಗಾರ ಭಾರತ ತಂಡದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.
ಬಹುಕಾಲದ ಗೆಳತಿ ಮಿಥಾಲಿ ಪಾರುಲ್ಕರ್ ಅವರನ್ನ ಶಾರ್ದುಲ್ ಠಾಕೂರ್ ಇಂದು ವಿವಾಹವಾಗಲಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭದ ಹಲವು ಕಾರ್ಯಕ್ರಮಗಳು ನಡೆದಿದ್ದು ಅರಿಶಿನ ಮತ್ತು ಸಂಗೀತ ಸಮಾರಂಭದ ಪೋಟೋಗಳು ವೈರಲ್ ಆಗಿವೆ.
ಭಾರತ ತಂಡದ ಆಲ್ರೌಂಡರ್ ಶಾರ್ದೂಲ್ ಠಾಕೂರ್ 29 ನವೆಂಬರ್ 2021 ರಂದು ತಮ್ಮ ಗೆಳತಿ ಮಿತ್ತಾಲಿ ಪಾರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನೂ ಮಿತಾಲಿ ಬಗ್ಗೆ ಹೇಳುವುದಾದರೇ ಇವರು ಉದ್ಯಮಿಯಾಗಿದ್ದು, ಥಾಣೆಯಲ್ಲಿ ಆಲ್ ದಿ ಬೇಕ್ಸ್ ಹೆಸರಿನ ಸ್ಟಾರ್ಟ್ ಅಪ್ ಕಂಪನಿಯನ್ನು ನಡೆಸುತ್ತಿದ್ದಾರೆ. ಠಾಕೂರ್ ಮತ್ತು ಮಿಥಾಲಿ ಇಬ್ಬರೂ ದೀರ್ಘಕಾಲದ ಡೇಟಿಂಗ್ ಬಳಿಕ ಹೊಸ ಜೀವನವನ್ನ ಪ್ರಾರಂಭಿಸುತ್ತಿದ್ದಾರೆ.
Shardul Thakur Wedding: Shardul Thakur got married with girlfriend Mithali Parulkar…