ಧಾರವಾಡ : ಧಾರವಾಡ ಜಿಲ್ಲೆಯಿಂದ 1,452 ವಲಸೆ ಕಾರ್ಮಿಕರು ರಾಜಸ್ಥಾನಕ್ಕೆ.
ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ತವರೂರಿಗೆ ಕಳುಹಿಸುವುದಕ್ಕಾಗಿ ಹುಬ್ಬಳ್ಳಿ-ಜೋಧಪುರ-ಹುಬ್ಬಳ್ಳಿ ಮಧ್ಯೆ 2 ಟ್ರಿಪ್ ಶ್ರಮಿಕ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ.
ಇಂದು ಮತ್ತು ನಾಳೆ ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿರುವ ರೈಲು.
ಇಲ್ಲಿಂದ ಹೊರಟ ಮಾರನೇ ದಿನ ಮಧ್ಯಾಹ್ನ 2.30ಕ್ಕೆ ಜೋಧಪುರ ತಲುಪಲಿದೆ ರೈಲು.
ಮೇ 14 ಮತ್ತು 15ರಂದು ಸಂಜೆ 6 ಗಂಟೆಗೆ ಜೋಧಪುರದಿಂದ ಹೊರಡುವ ಈ ರೈಲು, ಮಾರನೇ ದಿನ ರಾತ್ರಿ 11.55ಕ್ಕೆ ಹುಬ್ಬಳ್ಳಿಗೆ.
ಮಿರಜ್, ಪುಣೆ, ವಾಸಾಯಿ ರೋಡ, ವಡೋದರಾ, ಪಾಲಂಪುರ ಮಾರ್ಗ ಮೂಲಕ ಸಂಚಾರ.
ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಲು ಜಿಲ್ಲಾಡಳಿತದ ಬಳಿ ಹೆಸರು ನೋಂದಾಯಿಸಿರುವ 1,452 ಜನ.
ಬೆಳಗ್ಗೆ 6 ಗಂಟೆಯಿಂದ ಎಲ್ಲ ಶ್ರಮಿಕ ವರ್ಗದವರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ.
ಇದಕ್ಕಾಗಿ ಪಾರ್ಕಿಂಗ್ ಪ್ರದೇಶದಲ್ಲಿ 15 ಕೌಂಟರ್.
ಆರೋಗ್ಯದ ವರದಿಯನ್ನು ನೋಂದಾಯಿತ ಗುರುತಿನ ಸಂಖ್ಯೆಯಡಿ ದಾಖಲೆ.
ವಲಸೆ ಕಾರ್ಮಿಕ ರಾಜಸ್ಥಾನಕ್ಕೆ ತೆರಳಿದ ನಂತರ ಅವರಿಗೆ ಕರೊನಾ ಸೋಂಕು ಪಾಸಿಟಿವ್ ಕಂಡುಬಂದಲ್ಲಿ ಈ ಗುರುತಿನ ಸಂಖ್ಯೆಯ ಸಹಾಯದಿಂದ ಆತನ ಹಿಸ್ಟರಿ ಕಂಡುಹಿಡಿಯಲು ಸರಳ.
ಆರೋಗ್ಯ ತಪಾಸಣೆ ವೇಳೆ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬರುವ ಕಾರ್ಮಿಕರ ಪ್ರವಾಸ ರದ್ದು.
24 ಬೋಗಿ ಹೊಂದಿರುವ ಶ್ರಮಿಕ ಎಕ್ಸ್ಪ್ರೆಸ್ ರೈಲು.
18 ಬೋಗಿಗಳಲ್ಲಿ ತಲಾ 72 ಜನರು ಪ್ರಯಾಣಿಸಲಿದ್ದಾರೆ.
4 ಬೋಗಿಗಳಲ್ಲಿ ತಲಾ 38 ಜನರು ಹಾಗೂ ರೈಲ್ವೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ.
ಇನ್ನುಳಿದ 2 ಬೋಗಿಗಳನ್ನು ಮೀಸಲು ಸ್ಥಿತಿಯಲ್ಲಿ ಇಡಲಾಗಿದೆ.
ಒಂದು ವೇಳೆ ಇನ್ನೂ ಹೆಚ್ಚಿನ ಪ್ರಯಾಣಿಕರು ಕೊನೇ ಕ್ಷಣದಲ್ಲಿ ಬಂದಲ್ಲಿ, ಮೀಸಲಿಟ್ಟಿರುವ ಈ ಬೋಗಿಗಳಲ್ಲಿ ಅವರಿಗೆ ಅವಕಾಶ.
ಪ್ರಯಾಣಿಕರಿಗೆ ತೊಂದರೆ ಆಗದಂತೆ ಊಟೋಪಚಾರದ ವ್ಯವಸ್ಥೆ.








