ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ ನಟ – ಶತ್ರುಘ್ನ ಸಿನ್ಹಾ
ಹಿರಿಯ ನಟ ರಾಜಕೀಯ ಮುಖಂಡ ಶತ್ರುಘ್ನ ಸಿನ್ಹಾ ಅವರು ಮಂಗಳವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೂ ಮೊದಲು ಸಿನ್ಹಾ ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದರು.
ಈ ಕುರಿತಾಗಿ “ಬಂಗಾಳದ ಹುಲಿ” ಮಮತಾ ಬ್ಯಾನರ್ಜಿ ಅವರ ಆಹ್ವಾನದ ಮೇರೆಗೆ ನಾನು ಟಿಎಂಸಿಗೆ ಸೇರಿದ್ದೇನೆ ಎಂದು ಟ್ವೀಟ್ ಶತ್ರುಘ್ನ ಸಿನ್ಹಾ ಮಾಡಿ ಅಧಿಕೃತ ಹೇಳಿಕೆ ನೀಡಿದ್ದಾರೆ.
“ನಮ್ಮದೇ ಆದ, ಬಂಗಾಳದ ಹುಲಿ, ಗೌರವಾನ್ವಿತ ಸಿಎಂ, ಮಮತ ಬ್ಯಾನರ್ಜಿ ಅವರ ಆಹ್ವಾನದ ಮೇರೆಗೆ ನಾನು ಟಿಎಂಸಿಗೆ ಸೇರಿದ್ದೇನೆ. ಈ ವಿಚಾರವನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ಒಬ್ಬ ಮಹಾನ್ ಮಹಿಳೆ, ಜನಸಾಮಾನ್ಯರ ಮಹಾನ್ ನಾಯಕಿಯ ನಾಯಕತ್ವದಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸಿನ್ಹಾ ಅವರು 2019 ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು, ಬಿಜೆಪಿ ಒನ್ ಮ್ಯಾನ್ ಶೋ ಆಗಿ ಮಾರ್ಪಟ್ಟಿದೆ ಮತ್ತು ಎಲ್ಲಾ ನಿರ್ಧಾರಗಳನ್ನು ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ತೆಗೆದುಕೊಂಡಿದೆ ಎಂದು ಉಲ್ಲೇಖಿಸಿದ್ದರು.
ಏಪ್ರಿಲ್ 12 ರಂದು ನಡೆಯಲಿರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ಟಿಕೆಟ್ ನಲ್ಲಿ ಅಸನ್ಸೋಲ್ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ.