ಕುರಿ ಬೇಕಾ ಕುರಿ.. ಆದ್ರೆ ಬೆಲೆ ಕೇಳ್ಬೇಡಿ… ಈ ಕುರಿ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ..
ಮಹಾರಾಷ್ಟ್ರ: ಕುರಿ, ಮೇಕೆ ಬೆಲೆ ಸಹಜವಾಗಿ ಹೆಚ್ಚಾಗಿಯೇ ಇರುತ್ತೆ. ತುಂಬಾ ಅಂದ್ರೆ 30-40 -50 ಸಾವಿರನೂ ಒಂದು ಕುರಿ ಮಾರಾಟವಾಗಿರಬಹುದು. ಆದ್ರೆ ಮಹಾರಾಷ್ಟ್ರದ ಈ ಕುರಿ ಬೆಲೆ ಕೇಳುದ್ರೆ ಶಶಾಕ್ ಆಗೋದು ಗ್ಯಾರಂಟಿ.
ಯಾಕಂದ್ರೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಡ್ ಗ್ಯಾಲ್ ತಳಿಯ ಈ ಕುರಿ ಒಂದೇ ಬರೋಬ್ಬರಿ 70 ಲಕ್ಷಕ್ಕೆ ಮಾರಾಟವಾಗಿದೆ. ಹೌದು ಈ ಕುರಿ ಇತರೇ ಕುರಿಗಳಿಗಿಂತಲೂ ಭಿನ್ನವಾಗಿದ್ದು, ಆಕರ್ಷಕವಾಗಿಯೂ, ಇದೆ. ಉತ್ತಮ ಸಂತಾನೋತ್ಪತ್ತಿ ಗುಣವನ್ನೂ ಹೊಂದಿದೆ. ಆದ್ರೆ ಕುರಿಗೆ 70 ಲಕ್ಷ ಅಂದ್ರೆ ಯಾರಿಗೆ ತಾನೆ ಶಾಕ್ ಆಗಲ್ಲ. ಆದ್ರೆ ಇದು ನಿಜ..
3 ಮಕ್ಕಳ ಜೊತೆ ತಾಯಿ ನಾಪತ್ತೆ… ಕಾಡಿನಲ್ಲಿ ಪತ್ತೆ… ಕೊಳೆತ ಸ್ಥಿತಿಯಲ್ಲಿ..!
ಅಂದ್ಹಾಗೆ ಈ ಕುರಿ ಮಾರಾಟವಾಗುವುದಕ್ಕೂ ಮುನ್ನ ಇದರ ಮಾಲೀಕರಾಗಿದ್ದದ್ದು ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತಹಸೀಲ್ ನ ಬಾಬು. ಅವರಿಂದ ಈ ಕುರಿಯನ್ನ ಗ್ರಾಹಕರು ಬರೋಬ್ಬರಿ 70 ಲಕ್ಷ ಕೊಟ್ಟು ಖರೀದಿ ಮಾಡಿದ್ದಾರೆ.
ಈ ಕುರಿಯ ವಿಶೇಷತೆ ಅಂದ್ರೆ ಈ ಕುರಿಗೆ ಬಾಬು ಕುರಿಗೆ ಮೋದಿ ಎಂದು ನಾಮಕರಣ ಮಾಡಿದ್ದರು. ಅಂದ್ಹಾಗೆ ಮೊದಲಿಗೆ ಈ ಕುರಿಗೆ ಸರ್ಜಾ ಎಂಬ ಹೆಸರಿಟ್ಟಿದ್ದರಂತೆ. ಬಳಿಕ ನಮೋ ಫ್ಯಾನ್ ಆದ ಇವರು ಕುರಿಗೆ ಮರುನಾಮಕರಣ ಮಾಡಿದ್ದಾರೆ.
ಆದ್ರೆ 70 ಲಕ್ಷ ಕೊಟ್ಟಿದ್ದು ಯಾಕೆ ಅಂತ ನೋಡೋದಾದ್ರೆ…
ಬಾಬು ಈ ಕುರಿಯನ್ನ ಮಾರಾಟ ಮಾಡಲು ಸುತಾರಾಮ್ ತಯಾರಿರಲಿಲ್ಲ. ಯಾಕಂದ್ರೆ ಅದು ಅವನ ಪಾಲಿನ ಅದೃಷ್ಟದ ಕುರಿಯಾಗಿತ್ತಂತೆ. ಆದ್ರೆ ಗ್ರಾಹರೊಬ್ಬರು ಈ ಕುರಿ ಬೇಕೇ ಬೇಕೆಂದು ಪಟ್ಟು ಹಿಡಿದರಂತೆ. ಹೀಗಾಗಿ ದುಬಾರಿ ಬೆಲೆ ಹೇಳಿದ್ರೆ ಖರೀದಿ ಮಾಡೊಲ್ಲ ಅನ್ನೋ ಪ್ಲಾನ್ ನಲ್ಲಿ 1.30 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ ಬಾಬು. ಆದ್ರೆ ಗ್ರಾಹಕರು ಕೊನೆಗೆ 70 ಲಕ್ಷ ಕೊಟ್ಟು ಕೊನೆಗೂ ಕುರಿ ಮರಿ ಖರೀದಿ ಮಾಡಿದ್ದಾರೆ.
ಆದ್ರೆ ಇಷ್ಟೊಂದು ಹಣ ಸಿಕ್ಕಿದ್ದಕ್ಕೆ ಆತ ಪ್ರದಾನಿ ಮೋದಿ ಅವರನ್ನೇ ಶ್ಲಾಘಿಸಿದ್ದಾನೆ. ಅಷ್ಟೇ ಅಲ್ಲ ಇದೀಗ ಈ ತಳಿಯ ಕುರಿ ಬೆಲೆಯನ್ನ ಕಂಡು ಅಚ್ಚರಿಗೀಡಾಗಿರೋ ಮಹಾರಾಷ್ಟ್ರ ಕುರಿ ಮತ್ತು ಆಡು ಅಭಿವೃದ್ಧಿ ನಿಗಮ ಈ ತಳಿಯ ಕುರಿಗಳ ಅಭಿವೃದ್ಧಿಗೆ ಮುಂದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel