10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ…!
ಎವರ್ ಗ್ರೀನ್ ಬ್ಯೂಟಿ , ಫಿಟ್ನೆಸ್ ಫ್ರೀಕ್ , ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರು ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದಲೇ ಅಭಿಮಾನಿಗಳನ್ನ ಸಂಪಾನೆ ಮಾಡಿರೋದು ಒಂದೆಡೆಯಾದ್ರೆ , ಇಬ್ಬರು ಮಕ್ಕಳ ತಾಯಿಯಾದ ನಂತರವೂ ಅವರ ಫಿಟ್ ನೆಸ್ ಮತ್ತೆ ಬ್ಯೂಟಿ ಎಂಥವರನ್ನೂ ಅಚ್ಚರಿಗೊಳಿಸುತ್ತೆ.. ಜೊತೆಗೆ ಡ್ಯಾನ್ಸ್ ವಿಚಾರದಲ್ಲೂ ಶಿಲ್ಪಾ ಶೆಟ್ಟಿ ಹೆಸರು ಸದಾ ನೆನಪಿರುತ್ತೆ.. 
46ನೇ ವಯಸ್ಸಿನಲ್ಲೂ ಸುಂದರವಾಗಿ ಬಳಕುವ ಬಳ್ಳಿಯಂತೆ ಇರುವ ಶಿಲ್ಪಾ ಶೆಟ್ಟಿಯ ಸೌಂದರ್ಯದ ರಹಸ್ಯ ಯೋಗ ಎನ್ನುವ ವಿಚಾರ ಅವರೇ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಯೋಗ ಮಾಡುತ್ತಿರುವ ಶಿಲ್ಪ ಆಗಾಗ ಯೋಗದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಶಿಲ್ಪ ಫಿಟ್ ಅಂಡ್ ಫೈನ್ ಕಾಣಿಸಿಕೊಳ್ಳಲು ಯಾವುದೇ ಮಾತ್ರೆಗಳನ್ನು ಅವಲಂಬಿಸಿಲ್ಲ. ಯೋಗ, ದೈಹಿಕ ಅಭ್ಯಾಸ, ಸೂಕ್ತ ಆಹಾರ ಸೇವಿಸಿದರೆ ಫಿಟ್ ಆಗಿ ಇರಬಹುದು ಎಂದು ಶಿಲ್ಪಾ ಶೆಟ್ಟಿ ಹೇಳುತ್ತಾರೆ. ಫಿಟ್ನೆಸ್ ಬಗ್ಗೆ ಶಿಲ್ಪಾ ಶೆಟ್ಟಿ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ಒಂದು ಜಾಹೀರಾತಿನ ಆಫರ್ ನೀಡಲಾಗಿತ್ತು.. ಇದಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳನ್ನ ಕೊಡುವ ಆಫರ್ ಮಾಡಲಾಗಿತ್ತು. ಆದ್ರೆ ಶಿಲ್ಪಾ ಶೆಟ್ಟಿ ಇದನ್ನ ತಿರಸ್ಕರಿಸಿದ್ದಾರೆ..
ಹೌದು.. ಸ್ಲಿಮ್ ಮಾತ್ರೆಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಜಾಹೀರಾತು ಕಂಪನಿಯೊಂದು 10 ಕೋಟಿ ರೂ. ಆಫರ್ ಮಾಡಿದ್ರೆ ನಟಿ ಶಿಲ್ಪಾ ಶೆಟ್ಟಿ ಈ ಆಫರ್ ಅನ್ನ ರಿಜೆಕ್ಟ್ ಮಾಡಿದ್ದಾರೆ. ಅಂದ್ಹಾಗೆ ಈ ಆಫರ್ ಈಗ ಸಿಕ್ಕಿರೋದಲ್ಲ.. ಕಳೆದ 3 ವರ್ಷಗಳ ಹಿಂದೆಯೇ ಸಿಕ್ಕಿತ್ತು.
ಜಾಹೀರಾತು ಕಂಪನಿಯೊಂದು ಸ್ಲಿಮ್ ಮಾತ್ರೆಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಶಿಲ್ಪ ಶೆಟ್ಟಿಗೆ ಆಫರ್ ಮಾಡಿತ್ತು. ಆದರೆ ಯೋಗ ಮತ್ತು ವರ್ಕೌಟ್‌ನಲ್ಲಿ ನಂಬಿಕೆ ಇಟ್ಟಿರುವ ಶಿಲ್ಪಾ, ನಂಬಿಕೆಯಿಲ್ಲದ ವಿಷಯಗಳನ್ನು ಜನರಿಗೆ ಹೇಳಲು ತನ್ನಿಂದ ಸಾಧ್ಯವಿಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಿಲ್ಪ ಶೆಟ್ಟಿ, ‘ಸ್ಲಿಮ್ಮಿಂಗ್ ಮಾತ್ರೆಗಳು ತ್ವರಿತ ಫಲಿತಾಂಶಗಳಿಗಾಗಿ ಮಾತ್ರ. ಆದರೆ ಶಿಸ್ತಿನ ದಿನಚರಿಯ ವ್ಯಾಯಾಮವನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.








