ನಾದಬ್ರಹ್ಮ ಹಂಸಲೇಖ ಅವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ
ನಾದಬ್ರಹ್ಮ , ಸ್ಯಾಂಡಲ್ ವುಡ್ ಸಂಗೀತಲೋಕದ ದಿಗ್ಗನ ಹಂಸಲೇಖ ಅವರಿಗೆ ಇಂದು 70ನೇ ಹುಟ್ಟುಹಬ್ಬದ ಸಂಭ್ರಮ.. ಪ್ರೇಮಲೋಕ, ರಣಧೀರ ಸಿನಿಮಾಗಳ ಮೂಲಕವೇ ಹಂಸಲೇಖ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿತ್ತು.. ಕನ್ನಡ ಚಿತ್ರರಂಗಕ್ಕೆ ಗೀತ ಸಾಹಿತಿಯಾಗಿ ಕಾಲಿಟ್ಟು , ಅವರಿಗೆ ಸಂಗೀತ ನಿರ್ದೇಶಕರಾಗಿ ದೊಡ್ಡ ಯಶಸ್ಸು, ಜನಪ್ರಿಯತೆ ಗಳಿಸಿದ್ದಾರೆ ಹಂಸಲೇಖ.. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾರಂಗದ ಹಲವಾರು ಗಣ್ಯರು , ಅಭಿಮಾನಿಗಳು , ಸಂಗೀತಕ ಲೋಕದ ದಿಗ್ಗಜರು ಶುಭಹಾರೈಸುತ್ತಿದ್ದಾರೆ..
ನಾದಬ್ರಹ್ಮ ಹಂಸಲೇಖ ಅವರು ಜನಿಸಿದ್ದು ಜೂನ್ 23, 1951 ಮೈಸೂರಿನಲ್ಲಿ.. ಇವರ ಮೂಲ ಹೆಸರು ‘ಗಂಗರಾಜು’. ಬಳಿಕ ಹಂಸಲೇಖರಾಗಿ ಸಂಗೀತ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.. 1973 ರಲ್ಲಿ ‘ತ್ರಿವೇಣಿ’ ಚಿತ್ರದ ‘ನೀನಾ ಭಗವಂತ’ ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಹಂಸಲೇಖ ಅವರು ಇದುವರೆಗೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ, ಸಾಹಿತ್ಯ ನೀಡಿದ್ದಾರೆ. ನಾನು ನನ್ನ ಹೆಂಡತಿ, ಪ್ರೇಮಲೋಕ, ರಣಧೀರ , ಶ್ರೀರಾಮಚಂದ್ರ ಹೀಗೆ ಬಹುತೇಕ ರವಿಚಂದ್ರನ್ ಅವರ ಸಿನಿಮಾಗಳ ಮೂಲಕವೇ ಖ್ಯಾತಿ ಪಡೆದಿದ್ದರು.
ಅಂಜದ ಗಂಡು , ಅವಳೇ ನನ್ನ ಹೆಂಡತಿ , ನಾನು ನನ್ನ ಹೆಂಡತಿ , ಮಿಸ್ಟರ್ ರಾಜ , ರಣರಂಗ , ಸಾಂಘ್ಲಿಯಾನ, ಯುಗಪುರುಷ, ಬಣ್ಣದ ಗೆಜ್ಜೆ , ಬೆಳ್ಳಿ ಕಾಲುಂಗುರ , ರಾಜಾಹುಲಿ ಹೀಗೆ ಅನೇಕ ಸಿನಿಮಾಗಳಲ್ಲಿ ಅವರ ಕೆಲಸ , ಅವರ ಹಾಡುಗಳು ಎಂದೆಂದಿಗೂ ಎವರ್ ಗ್ರೀನ್ ಆಗಿಯೇ ಉಳಿಯುತ್ತದೆ.. 350ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. 1990 ರಲ್ಲಿ ಹಿನ್ನಲೆ ಗಾಯಕಿ ಲತಾ ಎನ್ನುವರನ್ನು ವಿವಾಹವಾದರು.
ಇವರು ಹಿನ್ನೆಲೆ ಗಾಯಕನಾಗಿ ‘ಕಿಂದರಿ ಜೋಗಿಯ ‘ – ಬಂದ ಬಂದ ಬಂದ ಕಿಂದರಿಜೋಗಿ , ‘ಹಗಲು ವೇಷ’ದ – ಬಾರೋ ಬಾ ಬಾರೋ ಶಿವಶಿವನೇ , ಮೀಸೆ ‘ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ – ನಿನ್ನ ಅತ್ತೆ ಕಾಟ ತಾಳದ್ರೆ ಹೀಗೆ ಅನೇಕ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಹಂಸಲೇಖ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯಪ್ರಶಸ್ತಿ , ಅತ್ಯತ್ತುಮ ಸಾಹಿತ್ಯಕ್ಕಾಗಿ ರಾಜ್ಯಪ್ರಶಸ್ತಿ , ರಾಮಾಚಾರಿ , ಓಂ , ನೆನಪಿರಲಿ ಸಿನಿಮಾಗಳಿಂದ ಫಿಲ್ಮ್ ಫೇರ್ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ..