ಅಶ್ಲೀಲ ವಿಡಿಯೋ ಕೇಸ್ – ಪತಿಯ ಕಾನೂನು ಬಾಹಿರ ಚಟುವಟಿಗಳಲ್ಲಿ ಶಿಲ್ಪಾ ಶೆಟ್ಟಿ ಪಾಲಿದ್ಯಾ..?
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲುಯವು ಜುಲೈ 23 ರವರೆಗೂ ಅವರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.. ಈ ನಡುವೆ ರಾಜ್ ಕುಂದ್ರ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತ ಇದ್ದಾರೆ.. ರಾಜ್ ಕುಂದ್ರ ಪೋರ್ನ್ ವಿಡಿಯೋಗಳ ಕುರಿತಾಗಿ ಮಾಡಿದ್ದ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಕೆಲವೊಬ್ರು ರಾಜ್ ಕುಂದ್ರಾ ಪರ ನಿಂತಿದ್ದಾರೆ..
ಜುಲೈ 19 ರಂದು ರಾಜ್ ಕುಂದ್ರಾ ಬಂಧನವಾಗಿತ್ತು.. ಜೊತೆಗೆ ಕುಂದ್ರಾ ಆಪ್ತ ಸ್ನೇಹಿತ ರೈನ್ ಥರ್ಪ್ ನನ್ನ ಸಹ ಅರೆಸ್ಟ್ ಮಾಡಲಾಗಿದೆ.. ಈ ಪ್ರಕರಣದಲ್ಲಿ ಮತ್ತಷ್ಟು ಜನರ ಹೆಸರುಗಳು ಕೇಳಿ ಬರ್ತಿದೆ. ಅಲ್ಲದೇ ರಾಜ್ ಕುಂದ್ರಾ ವಿರುದ್ಧ ಪ್ರಮುಖ ಸಾಕ್ಷ್ಯಗಳಿವೆ ಎಂದು ಮುಂಬೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆದ್ರೆ ಇದೀಗ ಪ್ರಶ್ನೆ ಈ ಪ್ರಕರಣದಲ್ಲಿ ಪತಿಯ ಜೊತೆಗೆ ಶಿಲ್ಪಾ ಶೆಟ್ಟಿಯದ್ದು ಪಾಲಿದ್ಯಾ…? ಅನ್ನೋದು.. ಹೌದು ಪತಿ ಜೈಲು ಸೇರಿದ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ… ಅವರಿಗೂ ಕೂಡ ಕಂಟಕವಿದ್ಯಾ ಅನ್ನೋ ಚರ್ಚೆಗಳು ಜೋರಾಗಿವೆ.. ಆದ್ರೆ ಈ ಕುರಿತು ಪೊಲೀಸರು ಸ್ಪಷ್ಟನೆಯನ್ನೂ ನೀಡಿ ಗೊಂದಲಗಳಿಗೆ ತೆರ ಎಳೆದಿದ್ದಾರೆ.
ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಪಾತ್ರ ಇರುವ ಬಗ್ಗೆ ನಮಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೂ ತನಿಖೆ ಮುಂದುವರಿಯುತ್ತಿದೆ. ಈ ಪ್ರಕರಣದಲ್ಲಿ ಯಾರಾದರೂ ಸಂತ್ರಸ್ಥರಿದ್ದರೆ ದಯವಿಟ್ಟು ಮುಂಬೈ ಪೊಲೀಸರನ್ನು ಸಂಪರ್ಕಿಸಿ. ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.
BIGGBOSS 8 : ವೈಲೆಂಟ್ ಆಗಿ ಪ್ರಶಾಂತ್ ಮೇಲೆ ಕೈ ಎತ್ತಿದ ವೈಷ್ಣವಿ..?
ಇತ್ತೀಚೆಗೆ ಮಾಡೆಲ್ ಗೆಹೆನಾ ವಸಿಷ್ಠ ಈ ಬಗ್ಗೆ ಪ್ರತಿಕ್ರಿಯಿಸಿ ರಾಜ್ ಕುಂದ್ರಾ ಬೆಂಬಲಕ್ಕೆ ನಿಂತತಿದ್ದರು.. ‘ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ಮಾಡಿಲ್ಲ, ಅದು ಬೋಲ್ಡ್ ಸಿನಿಮಾ. ನಾನು ಅವರ ಜೊತೆ ಮೂರು ಸಿನಿಮಾ ಮಾಡಿದ್ದೇನೆ. ಶೋಷಣೆಯೂ ಮಾಡಿಲ್ಲ. ಸರಿಯಾದ ವೇತನವೂ ಕೊಟ್ಟಿದ್ದಾರೆ. ಇದು ನಟಿಯರ ಸಮ್ಮತಿಯಿಂದಲೇ ಆಗಿರುವುದ, ದಯಮಾಡಿ ಎರಿಯೋಟಿಕ್ ಸಿನಿಮಾಗಳನ್ನ ಪೋರ್ನ್ ಸಿನಿಮಾಗಳ ಜೊತೆಗೆ ಸೇರಿಸಬೇಡಿ ‘ ಎಂದಿದ್ದರು.