ಶಿವಮೊಗ್ಗ | ವಿಮಾನ ನಿಲ್ದಾಣ ಕಾಮಗಾರಿ ಬಳಿ ಸ್ಫೋಟಕ ವಸ್ತು

1 min read
Shimoga

ಶಿವಮೊಗ್ಗ | ವಿಮಾನ ನಿಲ್ದಾಣ ಕಾಮಗಾರಿ ಬಳಿ ಸ್ಫೋಟಕ ವಸ್ತು

ಶಿವಮೊಗ್ಗ : ಸೋಗಾನೆ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸ್ಫೋಟಕ ವಸ್ತುಗಳಾದ 3,200 ಡಿಟೋನೇಟರ್ ಹಾಗೂ 36 ಬಾಕ್ಸ್ ಜಿಲೆಟಿನ್ ಪೇಸ್ಟ್ ಪತ್ತೆಯಾಗಿದೆ.

ಹುಣಸೋಡು ಬ್ಲಾಸ್ಟ್ ನಂತರ ಜಲ್ಲಿ ಕ್ರಷರ್ ಘಟಕಗಳು ಸ್ಥಗಿತಗೊಂಡಿದ್ದು, ಕಾಮಗಾರಿಗೆ ಬೇಕಾಗಿದ್ದ ಜಲ್ಲಿ ಕೊರತೆ ಉಂಟಾಗಿದೆ.

ಈ ಬಗ್ಗೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಜಲ್ಲಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದರು. ಆಗ 4 ಎಕರೆ ಪ್ರದೇಶದಲ್ಲಿ ಜಲ್ಲಿ ಕ್ವಾರಿ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದರು.

ಕಾಮಗಾರಿಗೆ ಬೇಕಾದ ಜಲ್ಲಿ ಹಾಗೂ ಕಲ್ಲುಗಳನ್ಜು ಪಡೆಯಲು ಸ್ಫೋಟಕಗಳನ್ನು ಬಳಸಲಾಗುತ್ತಿತ್ತು. ಈ ಸ್ಫೋಟಕಗಳನ್ನು ಚಿಕ್ಕಬಳ್ಳಾಪುರದಿಂದ ಅನುಮತಿಯ ಮೇರೆಗೆ ತರಿಸಲಾಗಿತ್ತು.

Shimoga

ಆದ್ರೆ 200 ಕಿ.ಮೀ. ದೂರಕ್ಕಿಂತ ಹೆಚ್ಚು ದೂರದ ಸ್ಥಳಕ್ಕೆ ಸ್ಫೋಟಕ ಸಾಮಾಗ್ರಿ ಸಾಗಾಟ ಮಾಡಬಾರದು ಎಂಬ ನಿಯಮ ಇದೆ. ಆದ್ರೆ ಇಲ್ಲಿ ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಈ ಮಧ್ಯೆ ಹುಣಸೋಡು ಘಟನೆ ಬಳಿಕ ಜಿಲ್ಲಾಡಳಿತ ಸ್ಫೋಟಕ ವಸ್ತುವನ್ನು ಸ್ಫೋಟಿಸಲು ಅನುಮತಿ ನಿರಾಕರಿಸಿತ್ತು. ಹೀಗಾಗಿ ಸ್ಫೋಟಕ ಸರಬರಾಜುದಾರ ಸ್ಫೋಟಕವನ್ನು ಸ್ಥಳದಲ್ಲೇ ಬಿಟ್ಟು ತೆರಳಿದ್ದಾನೆ.

ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ನ್ಯಾಯಾಲಯದ ಅನುಮತಿ ಪಡೆದು ಸ್ಫೋಟಕ ನಿಷ್ಕ್ರಿಯಗೊಳಿಸಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd