Shimogga : ಔರಾದ್ಕರ್ ವರದಿಯಿಂದ ಶೇ.80 ಪೊಲೀಸ್ ಸಿಬ್ಬಂದಿಗೆ ಲಾಭ – ಆರಗ ಜ್ಞಾನೇಂದ್ರ
ಶಿವಮೊಗ್ಗ : ಔರಾಧ್ಕರ್ ವರದಿ – ಹಿರಿಯ ಅಧಿಕಾರಿಗಳ ಸಂಬಳದಲ್ಲಿ ವ್ಯತ್ಯಾಸ ವಿಚಾರವಾಗಿ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ..
ಔರಾದ್ಕರ್ ವರದಿ ಪ್ರಕಾರ ವ್ಯತ್ಯಾಸ ಇರೋದು ಸಹಜ. ಔರಾದ್ಕರ್ ವರದಿಯಿಂದ ಶೇ.80 ಪೊಲೀಸ್ ಸಿಬ್ಬಂದಿಗೆ ಲಾಭ ಸಿಕ್ಕಿದೆ. ಅನ್ಯಾಯ ಆದವರಿಗೆ ಭತ್ಯೆಯಲ್ಲಿ ಸರಿಪಡಿಸುವ ಕೆಲಸ ಆಗ್ತಿದೆ ಎಂದು ಹೇಳಿದ್ದಾರೆ..
ಇನ್ನೂ ಶಿವಮೊಗ್ಗದಲ್ಲಿ ಪೊಲೀಸ್ ಕಮೀಷನರೇಟ್ ಸ್ಥಾಪನೆ ವಿಚಾರವಾಗಿ ಮಾತನಾಡ್ತಾ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸೆಂಟ್ರಲ್ ಮಾರ್ಗಸೂಚಿ ಪ್ರಕಾರ ಆಗುತ್ತಿಲ್ಲ. ಆದರೂ ನನ್ನ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ..