ಶಿರೂರು ಟೋಲ್ ಪ್ಲಾಜ ಬಳಿ ಅಂಬುಲೆನ್ಸ್ ಭೀಕರ ಅಪಘಾತ….
ಶಿರೂರು ಟೋಲ್ ಪ್ಲಾಝಾ ಬಳಿ ಆಂಬುಲೆನ್ಸ್ ಭೀಕರ ಅಪಘಾತಕ್ಕೆ ತುತ್ತಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಟೋಲ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಪಲ್ಟಿಗಿದೆ.
ಶಿರೂರು ಟೋಲ್ ಪ್ಲಾಝಾ ಬಳಿಗೆ ಬರುತ್ತಿದ್ದಂತೆಯೇ ವಾಹನವು ಚಾಲಕ ನಿಯಂತ್ರಣ ಸಿಗದೆ ಟೋಲ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿದೆ. ಪರಿಣಾಮ ಮೂವರು ಮೃತಟ್ಟಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಆ್ಯಂಬುಲೆನ್ಸ್ ಸಂಚಾರಕ್ಕೆ ನೆರವು ನೀಡಲು ಮುಂದಾಗಿದ್ದ ಟೋಲ್ ಸಿಬ್ಬಂದಿಗಳು ಕೂಡ ಗಾಯಗೊಂಡಿದ್ದು, ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭೀಕರ ಅಪಘಾತದ ದೃಶ್ಯ ಇಲ್ಲಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
https://twitter.com/i/status/1549729125870407680








