ಶಿಂಧೆ ಸೇನೆಗೆ ಸೇರಿದ ಉದ್ಧವ್ ಠಾಕ್ರೇ ನೇತೃತ್ವ 3,000 ಕಾರ್ಯಕರ್ತರು
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಭಾನುವಾರ ಆಘಾತ ಎದುರಾಗಿದೆ. ಆ ಗುಂಪಿನ ಸುಮಾರು 3,000 ಕಾರ್ಯಕರ್ತರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದರು. ಇವರೆಲ್ಲರೂ ಮುಂಬೈನ ವರ್ಲಿ ಪ್ರದೇಶದಿಂದ ಬಂದವರು. ದಸರಾ ಸಂದರ್ಭದಲ್ಲಿ ಠಾಕ್ರೆ ಬಣ ಅದ್ಧೂರಿ ಸಭೆ ನಡೆಸಲು ಮುಂದಾಗಿರುವಾಗಲೇ ಈ ಆಘಾತ ಎದುರಾಗಿದೆ.
ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ನೇತೃತ್ವದ ಶಿವಸೇನೆಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಅನುಮತಿ ನೀಡಿತ್ತು. ಈ ಸಭೆಗೆ ವ್ಯಾಪಕ ವ್ಯವಸ್ಥೆ ಮಾಡಲಾಗುತ್ತಿರುವಾಗ 3,000 ಕಾರ್ಯಕರ್ತರು ಶಿಂಧೆ ಬಣಕ್ಕೆ ಪಕ್ಷಾಂತರ ಮಾಡಿದ್ದು ಉದ್ಧವ್‌ಗೆ ಹೊಡೆತವಾಗಿದೆ. ಮತ್ತೊಂದೆಡೆ, ಅವರೆಲ್ಲರೂ ಆದಿತ್ಯ ಠಾಕ್ರೆ ಕ್ಷೇತ್ರವಾದ ವರ್ಲಿಗೆ ಸೇರಿದವರು ಎಂಬುದು ಇನ್ನಷ್ಟು ಆಘಾತಕಾರಿಯಾಗಿದೆ.
ಜೂನ್‌ನಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದು ಗೊತ್ತೇ ಇದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸುಮಾರು 39 ಶಾಸಕರು ಪಕ್ಷಾಂತರ ಮಾಡಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಆ ನಂತರ ಅವರು ಮೂಲ ಶಿವಸೇನೆ ಎಂದು ಗುರುತಿಸಲು ಕೇಂದ್ರ ಚುನಾವಣಾ ಆಯೋಗವನ್ನು ಸಂಪರ್ಕಿಸಿದರು. ಈ ಕುರಿತು ಎರಡೂ ಗುಂಪುಗಳು ಸದ್ಯ ಕಾನೂನು ಹೋರಾಟ ನಡೆಸುತ್ತಿವೆ.
Shiv Sena: 3,000 workers of Uddhav Thackeray’s faction join Shinde Sena