Kabza : ಕಬ್ಜಾ ಅಡ್ಡಾದಲ್ಲಿ ಶಿವಣ್ಣ : ಅಫಿಶಿಯಲ್ ಪೋಸ್ಟರ್ ರಿಲೀಸ್…
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಆಕ್ಷನ್ ಥ್ರಿಲ್ಲರ್ ಕಬ್ಜಾ ಚಿತ್ರ ಈಗಾಗಲೇ ಸುದೀಪ್ ಮತ್ತು ಶ್ರಿಯಾ ಶರಣ್ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಕಬ್ಜಾ ತನ್ನ ಟೀಸರ್ ಮತ್ತು ಹಾಡುಗಳಿಂದ ಈಗಾಲೇ ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್ ರೀಲೀಸ್ ಆದಮೇಲೆ ಎಲ್ಲರ ನಿರೀಕ್ಷೆಗಳು ಬೆಟ್ಟದಷ್ಟಾಗಿವೆ. ಇದೀಗ ಕಬ್ಜಾ ಅಡ್ಡದಿಂದ ಮತ್ತೊಂದು ಸಂಚಲನಾತ್ಮಕ ಸುದ್ದಿ ಹೊರಬಂದಿದೆ.
ಕಬ್ಜಾ ಚಿತ್ರದ ಟ್ರೈಲರ್ ಮಾರ್ಚ್ 4 ರಂದು ತೆರೆಗೆ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ದಿನದ ಮೊದಲ ಕಬ್ಜಾ ಚಿತ್ರತಂಡ ಮತ್ತೊಂದು ಸರ್ಪ್ರೈಜ್ ಕೊಟ್ಟಿದೆ. ನಟ ಶಿವರಾಜ್ ಕುಮಾರ್ ಸಹ ಚಿತ್ರದಲ್ಲಿ ಪ್ರಮಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನ ಇಂದು ಪೋಸ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ಈಗಾಗಲೇ ನಟ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ತುಂಬಾ ದಿನಗಳಿಂದ ಹರಿದಾಡುತ್ತಿದ್ದವು ಆದರೇ ಈ ವರೆಗೆ ಈ ಗುಟ್ಟನ್ನ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ .
ಮೂವರು ಸ್ಟಾರ್ ಹೀರೋಗಳು ಒಂದೇ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ತಿಳಿದು ಪ್ರೇಕ್ಷಕರು ಇನ್ನಷ್ಟು ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಚಿತ್ರ ಮಾರ್ಚ್ 17 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
Shiva Rajkumar Is Apart Of Upendra And Sudeep Kabza Movie