Shivamogga | ಖಾಕಿ ಕಳಚಿ ಕೇಸರಿ ಹಾಕಲಿ : ಡಿ.ಕೆ.ಶಿವಕುಮಾರ್ ಆಕ್ರೋಶ
ಬೆಂಗಳೂರು : ಸಚಿವರೇ 144 ಸೆಕ್ಷನ್ ಉಲ್ಲಂಘಿಸಿದ್ರೂ ಅವರ ಕೇಸ್ ದಾಖಲಾಗಿಲ್ಲ. ಇದಕ್ಕೆ ಖಾಕಿ ಬಟ್ಟೆ ಹಾಕಿರುವವರು ಉತ್ತರಿಸಬೇಕು, ಇಲ್ಲಾ ಖಾಕಿ ಕಳಚಿ ಕೇಸರಿ ಹಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ನಿನ್ನೆ ಹರ್ಷನ ಕೊಲೆ ನಂತ್ರ ಅಂತ್ಯಕ್ರಿಯೆ ಮೆರವಣಿಗೆ ವೇಳೆ ನಡೆದ ಗಲಭೆಗೆ ಸಚಿವ ಈಶ್ವರಪ್ಪನವರೇ ಕಾರಣನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸಚಿವರು 144 ಸೆಕ್ಷನ್ ಜಾರಿಯಲ್ಲಿದ್ದರೂ,ಅದನ್ನ ಉಲ್ಲಂಘಿಸಿದ್ದಾರೆ.
ಆದ್ರೂ ಕೇಸ್ ಹಾಕಿಲ್ಲ. ಒಬ್ಬ ಮಂತ್ರಿಯೇ ಆ ರೀತಿ ಮಾಡಿದ ಮೇಲೆ ಯಾಕೆ ಬಿಟ್ಟಿದ್ದೀರಾ..?
ಅವರೇ ನಿಂತುಕೊಂಡು ಮೆರವಣಿಗೆ ಮಾಡಿಸಿ ಕಲ್ಲು ಹೊಡೆಸಿಕೊಂಡು ಕರೆದುಕೊಂಡು ಹೋದ್ರು. ಕೇಸ್ ಯಾಕೆ ಹಾಕಿಲ್ಲ. ಇದಕ್ಕೆ ಡಿಜಿ, ಎಸ್ ಪಿ ಉತ್ತರಿಸಬೇಕು. ಇಲ್ಲ ಖಾಕಿ ಕಳಚಿ ಕೇಸರಿ ಹಾಕಲಿ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಇನ್ನು ಧರಣಿ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಳೆದ 5 ದಿನ ನಮ್ಮೆಲ್ಲ ಶಾಸಕರು ಅಹೋರಾತ್ತಿ ಧರಣಿ ಮಾಡ್ತಿದ್ದೇವೆ. 24 ಪರಿಷತ್ ಸದಸ್ಯರು,52 ಜನ ಶಾಸಕರು ಸದನದಲ್ಲಿ ಮಲಗಿದ್ದೇವೆ ಧರಣಿ ನಡೆಸಿದ್ದೇವೆ.
ಇಂದು ಕೂಡ ನಡೆಸುತ್ತೇವೆ. ಆಂತರಿಕವಾಗಿ ಸದನ ಮೊಟಕು ಮಾಡ್ತಾರೆ ಅಂತ ತಿಳಿದುಬಂದಿದೆ. ಅಧಿವೇಶನ ಮೊಟಕು ಮಾಡಿದ್ರೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡ್ತೀವಿ ಎಂದು ತಿಳಿಸಿದ್ದಾರೆ.
shivamogga-dk shivakumar K S eshwarappa Saaksha Tv









