ಶಿವಮೊಗ್ಗ : ಮರ ಬಿದ್ದು ಐದು ವರ್ಷದ ಬಾಲಕಿ ಸಾವು

1 min read
SHIVAMOGGA

ಶಿವಮೊಗ್ಗ : ಮರ ಬಿದ್ದು ಐದು ವರ್ಷದ ಬಾಲಕಿ ಸಾವು

ಶಿವಮೊಗ್ಗ : ರಸ್ತೆಯಲ್ಲಿ ಹೋಗುವಾಗ ಒಣಗಿದ ಮರ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಳಿ ಗ್ರಾಮದಲ್ಲಿ ನಡೆದಿದೆ. 5 ವರ್ಷದ ಪ್ರತಿಕ್ಷಾ ಮೃತ ಬಾಲಕಿಯಾಗಿದ್ದಾಳೆ.

ಟ್ಯೂಷನ್ ಮುಗಿಸಿಕೊಂಡು ಮನಗೆ ಹೋಗುವಾಗ ಪ್ರತಿಕ್ಷಾಳ ಮೇಲೆ ರಸ್ತೆ ಪಕ್ಕದಲ್ಲಿದ್ದ ಒಣಗಿದ ಮರ ಬಿದ್ದಿದೆ.

ಇದರಿಂದ ಪ್ರತಿಕ್ಷಾ ತೀವ್ರ ಅಸ್ವಸ್ಥಳಾಗಿದ್ದು ಕೂಡಲೇ ಸಾಗರದ ಆಸ್ಪತ್ರೆ ದಾಖಲು ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಪ್ರತಿಕ್ಷಾ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.

SHIVAMOGGA

ದುರ್ದೈವ ಎನಂದ್ರೆ ಕಳೆದ ಆರು ತಿಂಗಳ ಹಿಂದೆಯಷ್ಟೆ ಪ್ರತಿಕ್ಷಾ ತಂದೆಯನ್ನು ಕಳೆದುಕೊಂಡಿದ್ದಳು. ಈಕೆ ತಾಯಿ ಮನೆಗೆಲಸ ಮಾಡಿಕೊಂಡು ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದಳು.

ಈಗ ಪ್ರತಿಕ್ಷಾ ಮರಣದೊಂದಿಗೆ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಘಟನೆಯ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd