Shivamogga – ಮಲೆನಾಡಿನಲ್ಲಿ ಹೋರಿ ದಾಳಿಗೆ ಇಬ್ಬರು ಬಲಿ
ಶಿವಮೊಗ್ಗ : ಮಲೆನಾಡಿನಲ್ಲಿ ಹೋರಿ ಬೆದರಿಸುವ ಹಬ್ಬ ಆರಂಭವಾಗಿದ್ದು, ಸ್ಪರ್ಧೆಯಲ್ಲಿ ಹೋರಿ ಮಾಡಿದ ಅವಾಂತರದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಹೋರಿ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು.
ಇದರಲ್ಲಿ ಭಾಗಿಯಾಗಿದ್ದು 36 ವರ್ಷದ ಪ್ರಶಾಂತ್ ಮತ್ತು 20 ವರ್ಷದ ಆದಿ ಮೃತಪಟ್ಟಿದ್ದಾರೆ.
![shivamogga two-people-died-due-to-bull-attack](http://saakshatv.com/wp-content/uploads/2022/10/shivamogga-1.jpg)
ಹೋರಿ ಬೆದರಿಸುವ ವೇಳೆ ಪ್ರಶಾಂತ್ ಮೈಮೇಲೆ ಹಾರಿ, ಎದೆ ಮೇಲೆ ಕಾಲಿಟ್ಟು ಹೋರಿ ಮುಂದಕ್ಕೆ ಸಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಆದಿ ಹೋರಿ ತಿವಿತಕ್ಕೊಳಗಾಗಿ ಮೃತಪಟ್ಟಿದ್ದಾನೆ.